ಅಗತ್ಯ ಅನುದಾನ ನೀಡಲು ಒತ್ತಾಯ

0
Petition to CM from Pinjara Nadaf taluk unit
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ರಾಜ್ಯ ಸರ್ಕಾರವು ಪಿಂಜಾರ, ನದಾಫ್ ಹಾಗೂ 13 ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಬೇಕು ಎಂದು ಆಗ್ರಹಿಸಿ ಸ್ಥಳೀಯ ಪಿಂಜಾರ/ನದಾಫ್ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಪಟ್ಟಣದ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.

Advertisement

ರಾಜ್ಯದಲ್ಲಿ ಪಿಂಜಾರ, ನದಾಫ್ ಸೇರಿ 13 ಜಾತಿಗಳ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಸೇರಿ ಹಲವು ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದ ಮತ್ತು ಕಡುಬಡತನದಲ್ಲಿ ಜೀವನವನ್ನು ನಡೆಸುತ್ತಿವೆ. ಇಂತಹ ಶೋಷಿತ ಸಮುದಾಯದ ಭಾಗದ ಈ ಜನಾಂಗ ಇಸ್ಲಾಂ ಧರ್ಮದ ಮುಸ್ಲಿಂ (ಅಲ್ಪಸಂಖ್ಯಾತರ) ಪಂಗಡದಲ್ಲಿದ್ದರೂ ಸಹ ಸರ್ಕಾರದ ವೃತ್ತಿಪರ ಜಾತಿಗಳ ವಿಂಗಡನೆ ಅನ್ವಯ ನಧಾಪ್, ಪಿಂಜಾರ ಉಪ ಪಂಗಡಕ್ಕೆ ಸೇರಿದೆ. ಸರ್ಕಾರದ ನಿರ್ದೇಶನದಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮತ್ತು ಇತರ ಯೋಜನೆಗಳ ಲಾಭ ಪಡೆಯಲು ತಾಂತ್ರಿಕ ತೊಂದರೆ ಮತ್ತು ಅಧಿಕಾರಗಳ ನಿರ್ಲಕ್ಷ್ಯದಿಂದ ಸರ್ಕಾರದ ಸೌಲಭ್ಯಗಳು ನಮಗೆ ಸಿಗದಂತಾಗಿವೆ ಎಂದು ದೂರಿದರು.

ಚುನಾವಣಾ ದಿನಗಳಲ್ಲಿ ತಾವು ಬಡಪರ ಪರ ಹಾಗೂ ಸಾಮಾಜಿಕ ನ್ಯಾಯವನ್ನು ನೀಡುವ ದಿಟ್ಟ ಸರ್ಕಾರ ಎಂದು ಪ್ರಚಾರ ಪಡೆಯುತ್ತೀರಿ. ರಾಜ್ಯದಲ್ಲಿ 25 ಲಕ್ಷ ಜನಸಂಖ್ಯೆ ಹೊಂದಿದ ನಮ್ಮತಂಹ ಬಡ ಸಮಾಜಗಳನ್ನು ಕಡೆಗಣನೆ ಮಾಡುವುದು ಘೋರ ಅನ್ಯಾಯ. ಹೀಗಾಗಿ ಪಿಂಜಾರ, ನದಾಫ್ ಪ್ರತ್ಯೇಕ ನಿಗಮಕ್ಕೆ ಅವಶ್ಯವಿರುವ ಅನುದಾನವನ್ನು ನೀಡಬೇಕು. ಇಲ್ಲದಿದ್ದರೆ ಹಿಂದುಳಿದ ಸಮಾಜಗಳಿಗೆ ಅನ್ಯಾಯ ಎಸಗತ್ತಿರುವ ಕುರಿತು ರಾಜ್ಯಾದ್ಯಂತ ಸಾರ್ವಜನಿಕರ ಗಮನಕ್ಕೆ ತರಲು ಬಹಿರಂಗವಾಗಿ ಪ್ರತಿಭಟನೆ, ಧರಣಿಗಳನ್ನು ನಡೆಸುತ್ತೇವೆ ಎಂದು ಎಚ್ಚರಿಸಿದರು.

ಸಂಘಟನೆಯ ತಾಲೂಕಾಧ್ಯಕ್ಷ ಬಾಬನಸಾಬ ನದಾಫ, ಪ್ರಧಾನಕಾರ್ಯದರ್ಶಿ ಡಿ.ಎಚ್. ನದಾಫ, ಯಮನೂರಸಾಬ ಕಳ್ಳಿಗುಡಿ, ಜಾಕೀರಹುಸೇನ ನಧಾಪ, ವಜೀರಸಾಬ ನದಾಫ, ಹಸನಸಾಬ ನದಾಫ, ರಾಜಾಭಕ್ಷಿ ನಧಾಪ, ಇಮಾಮಸಾಬ ನದಾಫ, ರೋಷನಬಿ ಶಿರಗುಂಪಿ, ಮಮ್ತಾಜಬೇಗಂ, ಪೀರಮಾ, ಅಲ್ಲಾಬಿ, ರಹಿಮಾನಬಿ, ರೇಷ್ಮಾ ಸೇರಿ ಇತರರು ಪಾಲ್ಗೊಂಡಿದ್ದರು.

 


Spread the love

LEAVE A REPLY

Please enter your comment!
Please enter your name here