ಬೆಳಗಾವಿ:- ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇರೋ ಪಿಜಿಯಲ್ಲಿ ವಿದ್ಯಾರ್ಥಿ ಓರ್ವರು ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ. ಪ್ರೀಯಾ ಕಾರ್ತಿಕ (27) ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಬೆಂಗಳೂರು ಮೂಲದವರಾಗಿರುವ ಪ್ರೀಯಾ ಬೆಳಗಾವಿ ಬಿಮ್ಸ್ ಪಿಜಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
Advertisement
ಮಾನಸಿಕ ಕಾಯಿಲೆಯಿಂದ ವಿದ್ಯಾರ್ಥಿನಿ ಬಳಲುತ್ತಿದ್ದರು ಎನ್ನಲಾಗಿದೆ. ಮನೋರೋಗ ವಿಭಾಗದಲ್ಲಿ ಪ್ರಿಯಾ ಪಿಜಿ ಮಾಡುತ್ತಿದ್ದಳು. ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬಿಮ್ಸ್ ಗೆ ನಿರ್ದೇಶಕ ಅಶೋಕ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಂಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.