ಸ್ಟೋನಿಬ್ರೂಕ್ ಪಬ್ʼನಲ್ಲಿನ ಫೋಟೋ ರಿವೀಲ್; ವಿನಯ್, ದರ್ಶನ್, ಚಿಕ್ಕಣ್ಣ ಅಕ್ಕಪಕ್ಕ..!

0
Spread the love

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನ ಒಂದೊಂದು ಸತ್ಯವೇ ಭಯಾನಕ ಮತ್ತು ಘನಘೋರವಾಗಿದೆ. ತನಿಖೆ ನಡೆಸಿದ ಪೊಲೀಸರು 3991 ಪುಟಗಳಲ್ಲಿ ದರ್ಶನ್ ಗ್ಯಾಂಗ್‌ನ ಅಟ್ಟಹಾಸವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಸದ್ಯಕ್ಕೆ ಚಾರ್ಜ್‌ಶೀಟ್‌ನಲ್ಲಿ ರೇಣುಕಾಸ್ವಾಮಿ ಕೊಲೆಗೂ ಮುನ್ನ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಆರೋಪಿ ದರ್ಶನ್‌ ಮತ್ತು ಗ್ಯಾಂಗ್‌ ಕರೆತಂದು ಪೊಲೀಸರು ಸ್ಥಳ ಮಹಜರು ಮಾಡಿಸಿರುವ ಫೋಟೋ ಕೂಡ ರಿವೀಲ್‌ ಆಗಿದೆ.

Advertisement

ಹತ್ಯೆಗೂ ಮುನ್ನ ರೇಣುಕಾಸ್ವಾಮಿ ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಳ್ಳುತ್ತಿರುವ ಫೋಟೊ ರಿವೀಲ್‌ ಆಗಿತ್ತು. ಅದರ ಬೆನ್ನಲ್ಲೇ ಸ್ಥಳ ಮಹಜರು ಫೋಟೊ ಕೂಡ ಹೊರಬಂದಿದೆ. ಆರ್‌ಆರ್‌ ನಗರದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ದರ್ಶನ್‌ ಪಾರ್ಟಿ ಮಾಡಿದ್ದರು. ಅವರನ್ನು ಕರೆತಂದು ಸ್ಥಳ ಮಹಜರು ಮಾಡಲಾಗಿದೆ.

ದರ್ಶನ್‌ಗಾಗಿಯೇ ‘ಡಿ ಬಾಸ್ ಸಫಾರಿ’ ಅಂತಾ ಪಬ್‌ ಮಾಲೀಕ ವಿನಯ್‌ ಪ್ರತ್ಯೇಕ ಲಾಂಜ್ ಮಾಡಿದ್ದ. ದರ್ಶನ್ ಪಾರ್ಟಿ ಮಾಡುವ ವೇಳೆ ಎಲ್ಲಿ ಕುಳಿತಿದ್ದರು. ಪ್ರದೋಶ್ ಎಲ್ಲಿ ಕೂತಿದ್ದ. ನಟ ಚಿಕ್ಕಣ್ಣ ಕುಳಿತಿದ್ದ ಸ್ಪಾಟ್ ಯಾವ್ದು.. ಹೀಗೆ ಪಾರ್ಟಿ ನಡೆಸಿದ್ದ ಸ್ಪಾಟ್‌ಗಳಲ್ಲಿ ಆರೋಪಿಗಳನ್ನು ಕೂರಿಸಿ ಸ್ಥಳ ಮಹಜರು ಮಾಡಲಾಗಿತ್ತು. ದರ್ಶನ್ ಎಡಬದಿಯಲ್ಲಿ ಪ್ರದೋಶ್ ಕುಳಿತಿದ್ದ, ದರ್ಶನ್ ಬಲಭಾಗದಲ್ಲಿ ನಟ ಚಿಕ್ಕಣ್ಣ ಕುಳಿತಿದ್ದ.


Spread the love

LEAVE A REPLY

Please enter your comment!
Please enter your name here