ದೈಹಿಕ ಶಿಕ್ಷಣವು ಕಲಿಕೆಗೆ ಪೂರಕ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗುಣಾತ್ಮಕ ಶಿಕ್ಷಣದೊಂದಿಗೆ ಮಗುವಿನ ಸಮಗ್ರ ಬೆಳವಣಿಗೆಗೆ ಪ್ರಾಧಾನ್ಯತೆ ನೀಡುವಂತೆ ಅಭಿಪ್ರಾಯ ಪಟ್ಟಿದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣವು ಚಟುವಟಿಕೆ ಆಧಾರಿತ ಶಿಕ್ಷಣವಾಗಿರುವುದರಿಂದ ಮಗುವಿನ ಹಾಗೂ ಶಿಕ್ಷಕರ ಕಲಿಕೆಗೆ ಪೂರಕವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯ್ಕ ಹೇಳಿದರು.

Advertisement

ಅವರು ಸಮೀಪದ ಅಡರಕಟ್ಟಿ ಗ್ರಾಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಯೋಗ, ರಾಷ್ಟ್ರಗೀತೆ ನಾಡಗೀತೆಯ ಕುರಿತು ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿದರು.

ಶಿಕ್ಷಣವು ಮನುಷ್ಯನ ಸರ್ವತೋಮುಖ ಬೆಳವಣಿಗೆ ಶಾರೀರಿಕ, ಬೌದ್ಧಿಕ, ಸಾಮಾಜಿಕ, ನೈತಿಕ ವಿಕಾಸವನ್ನುಂಟು ಮಾಡುವಲ್ಲಿ ದೈಹಿಕ ಹಾಗೂ ಆರೋಗ್ಯ ಶಿಕ್ಷಣ ಮಹತ್ವದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದಲೇ ದೈಹಿಕ ಶಿಕ್ಷಣ ಕ್ಷೇತ್ರವನ್ನು ಶಿಕ್ಷಣದ ಅವಿಭಾಜ್ಯ ಅಂಗ ಎಂಬುದಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ತಾಲೂಕು ದೈಹಿಕ ಪರಿವೀಕ್ಷಕರಾದ ಎಂ.ಎಂ. ಹವಳದ, ಕರಾಸನೌ ಸಂಘದ ಅಧ್ಯಕ್ಷ ಜಿ.ಡಿ. ಹವಳದ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಮ್.ಎ. ನದಾಫ್, ಪ್ರಾಥಮಿ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಎಸ್. ಹರ್ಲಾಪೂರ, ಚಂದ್ರಕಾಂತ ನೇಕಾರ, ಶಿರಹಟ್ಟಿ ತಾಲೂಕಿನ ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಫ್. ಮಠದ, ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷೆ ಜಯಶ್ರೀ ಭಂಗಿ, ಬಿಆರ್‌ಪಿ ಬಿ.ಎಮ್. ಯರಗುಪ್ಪಿ ಮುಂತಾದವರಿದ್ದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಎಮ್. ಬುರಡಿ ಮತ್ತು ಚೇತನ ಚುಂಚಾ ಆಗಮಿಸಿದ್ದರು.

ಎಸ್.ಸಿ. ಗೋಲಪ್ಪನವರ, ಬಿ.ಕೆ. ದ್ಯಾವನಗೌಡ್ರ, ಮುಖ್ಯೋಪಾಧ್ಯಾಯೆ ಎಸ್.ಎಚ್. ಉಮಚಗಿ, ಮಹಾಂತೇಶ ಹವಳದ, ಎ.ಎನ್. ಮುಳಗುಂದ, ಸಿ.ವಾಯ್. ಮೇಲಿನಮನೆ, ಎಮ್.ಡಿ. ತಳ್ಳಳ್ಳಿ, ಎಸ್.ಸಿ. ಹಿರೇಮಠ, ಕಿರಣ ಕಲಿವಾಳ, ಎಮ್.ಐ. ಕಣಕೆ, ಎಸ್.ಡಿ. ಲಮಾಣಿ, ಎ.ಎಮ್. ಗುತ್ತಲ, ಆರ್.ಎಚ್. ನೆರೆಗಲ್ ಹಾಗೂ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರು ಹಾಜರಿದ್ದರು. ಕೆ.ಎಮ್. ಕೊಟ್ರಮ್ಮ, ಎಮ್.ವಾಯ್. ನೀಲನಾಯ್ಕರ, ಎಸ್.ಎಮ್. ಕೌಜಗೇರಿ, ಎಸ್.ಕೆ. ಅಮ್ಮಿನಬಾವಿ, ಪಿ.ಬಿ. ಗುರುಮಠ ವಂದಿಸಿದರು. ಡಿ.ಡಿ. ಲಮಾಣಿ ಹಾಗೂ ಪಿ.ಸಿ. ಕಾಳಶೆಟ್ಟಿ ನಿರ್ವಹಿಸಿದರು.


Spread the love

LEAVE A REPLY

Please enter your comment!
Please enter your name here