x
Advertisement
ಅವರು ಮೊರಾರ್ಜಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಮುಳಗುಂದ ಪ್ರಾಥಮಿಕ ಶಾಲಾ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಕ್ಕಳು ಪ್ರಾಥಮಿಕ ಹಂತದಲ್ಲಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಇದರಿಂದ ವ್ಯಕ್ತಿತ್ವ ವಿಕಸನದ ಜೊತೆಯಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗುತ್ತಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಶಂಕರ ಹಡಗಲಿ, ಎಂ.ವಿ. ಪಾಟೀಲ್, ಎಸ್.ಬಿ. ಆಲೂರ, ದಿ.ಸಿ. ನದಾಫ್, ಟಿ.ಉದಯಕುಮಾರ, ಎನ್.ಕೆ. ಅಂಬಕ್ಕಿ, ವಿ.ಡಿ. ಸಿದ್ದನಗೌಡರ, ಸಿ.ಕೆ. ಭಜೆಂತ್ರಿ ಶಾಲಾ ಶಿಕ್ಷಕರ ವೃಂದ ಹಾಗೂ ಕ್ಲಸ್ಟರ್ ಮಟ್ಟದ ಕ್ರೀಡಾಪಟುಗಳು ಇದ್ದರು.


