ಟೋಲ್ ಸಿಬ್ಬಂದಿಗೆ ಗುದ್ದಿಸಿ ಎಸ್ಕೇಪ್ ಆಗುತ್ತಿದ್ದ ಪಿಕಪ್ ವಾಹನ ಚಾಲಕನಿಗೆ ಕಪಾಳಮೋಕ್ಷ!

0
Spread the love

ಮಂಗಳೂರು:- ಟೋಲ್ ಸಿಬ್ಬಂದಿಗೆ ಗುದ್ದಿಸಿ ಎಸ್ಕೇಪ್ ಆಗುತ್ತಿದ್ದ ಪಿಕಪ್ ವಾಹನ ಚಾಲಕನಿಗೆ ಪಾದಚಾರಿ ಕಪಾಳಮೋಕ್ಷ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲು ಟೋಲ್ ಬಳಿ ಜರುಗಿದೆ.

Advertisement

ಟೋಲ್ ತಪ್ಪಿಸಲು ರಾಂಗ್ ಸೈಡ್‌ನಲ್ಲಿ ಪಿಕಪ್ ಚಾಲಕ ಬಂದಿದ್ದಾನೆ. ಇದನ್ನು ತಡೆಯಲು ಹೋದ ಸಿಬ್ಬಂದಿಗೆ ಗುದ್ದಿಸಿ ಪಿಕಪ್ ಚಾಲಕ ಎಸ್ಕೇಪ್ ಆಗಿದ್ದಾನೆ. ಇದೇ ವೇಳೆ ಪಕ್ಕದಲ್ಲೇ ಹೋಗುತ್ತಿದ್ದ ಪಾದಚಾರಿಗೂ ಗುದ್ದಿಸಿದ್ದಾನೆ.

ಇದರಿಂದ ಸಿಟ್ಟಿಗೆದ್ದ ಪಾದಚಾರಿ, ಪಿಕಪ್ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಟೋಲ್ ಕೊಡದೇ ರಾಂಗ್ ಸೈಡ್‌ನಲ್ಲಿ ಚಾಲಕ ಎಸ್ಕೇಪ್ ಆಗಿದ್ದಾನೆ. ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಕೆಎ 19 ಎಎ 7484 ನೋಂದಣಿಯ ಪಿಕಪ್ ವಾಹನ ಹೋಗಿದೆ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here