ಪಿತೃಪಕ್ಷ ಪೂಜೆ ದಿನ ಸಿಗಲ್ಲ ಮಾಂಸ: ಹಿರಿಯರ ಹಬ್ಬ ಮಾಡುವ ಕುಟುಂಬಗಳಿಗೆ ಟೆನ್ಶನ್!

0
Spread the love

ಬೆಂಗಳೂರು:- ಈ ವರ್ಷ ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಜೊತೆಗೆ ಮಹಾಲಯ ಅಮಾವಾಸ್ಯೆ ಕೂಡ ಬಂದಿದೆ. ಇದು ಮಾಂಸಾಹಾರಿಗಳ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಗಾಂಧಿ ಜಯಂತಿ ಹಿನ್ನೆಲೆ ಪ್ರತಿ ವರ್ಷವೂ ಆ ದಿನ ಮಾಂಸಾಹಾರ ನಿಷೇಧ ಮಾಡಲಾಗುತ್ತದೆ. ಆದರೆ, ಪಿತೃಪಕ್ಷಕ್ಕೆ ಬಹುತೇಕರು ಮಾಂಸದ ಖಾದ್ಯಗಳನ್ನೇ ಮಾಡುವ ಪದ್ಧತಿಯಲ್ಲೇ ಬಂದಿದ್ದಾರೆ.

Advertisement

ಈ ಹಿನ್ನೆಲೆ ಗಾಂಧಿ ಜಯಂತಿಯಂದೇ ಮಹಾಲಯ ಅಮಾವಾಸ್ಯೆ ಹಬ್ಬ ನಿಗದಿಯಾಗಿರುವುದರಿಂದ ಮಾಂಸ ಮಾರಾಟಕ್ಕೆ ಅನುಮತಿ ನೀಡಬೇಕು ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್‌ ಅಸೋಸಿಯೇಷನ್‌ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ಮಹಾಲಯದಂದು ಹಿಂದೂಗಳು ತಮ್ಮ ಪಿತೃಗಳಿಗೆ ಮಾಂಸವನ್ನು ಎಡೆಯಿಟ್ಟು ಪೂಜೆ ಮಾಡುತ್ತಾರೆ. ಗಾಂಧಿ ಜಯಂತಿ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಅಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ಅವಕಾಶವಿಲ್ಲ. ಇದರಿಂದ, ವ್ಯಾಪಾರಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುತ್ತದೆ.

ಹಿರಿಯರಿಗೆ ಮಾಂಸದ ಅಡುಗೆ, ಪೂಜೆಗೆ ಎಡೆ ಇಡಲು ಆಗುವುದಿಲ್ಲ. ಈ ಒಂದು ದಿನವನ್ನು ವಿಶೇಷ ದಿನ ಎಂದು ಪರಿಗಣಿಸಿ, ಮಾಂಸ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಸಿಎಂ ಮಾಂಸ ಮಾರಾಟಗಾರರು ಮನವಿ ಮಾಡಿದ್ದಾರೆ ಎಂದು ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್ ನಾಗರಾಜ್ ತಿಳಿಸಿದ್ದಾರೆ.

ಈಗಾಗಲೇ ಮಹಾಲಯ ಅಮಾವಾಸ್ಯೆಗೆ ಬೇರೆ ಬೇರೆ ರಾಜ್ಯದಿಂದ ಕುರಿ, ಮೇಕೆಗಳನ್ನು ತರಿಸಿಕೊಳ್ಳಲಾಗಿದೆ. ಕೋಳಿಗಳನ್ನು ರೆಡಿ ಇಟ್ಟುಕೊಂಡಿದ್ದೇವೆ ಎನ್ನುತ್ತಿದ್ದಾರೆ ವ್ಯಾಪಾರಿಗಳು. ಕೆಲ ಮಾಂಸದ ಅಂಗಡಿ ಮಾಲೀಕರು ಮಾತ್ರ ನಾವು ಅಂದು ಮಾಂಸ ಕಟ್ ಮಾಡಿಯೇ ಮಾಡುತ್ತೇವೆ ಎಂದಿದ್ದಾರೆ.

ಗಾಂಧೀಜಿ ಹುಟ್ಟುವ ಮುಂಚೆಯಿಂದಲೂ ನಾವು ಮಹಾಲಯ ಅಮಾವಾಸ್ಯೆಗೆ ಹಿರಿಯರಿಗೆ ಎಡೆ ಇಡುತ್ತಿದ್ದೇವೆ. ಈ ಬಾರಿಯೂ ನಾವು ಇಡುತ್ತೇವೆ. ನಮ್ಮ ಗ್ರಾಹಕರಿಗಾಗಿ ಮಾಂಸ ಮಾರಾಟ ಮಾಡುತ್ತೇವೆ. ಅಧಿಕಾರಿಗಳು ಕೇಸ್ ಹಾಕಿದರೂ ಪರವಾಗಿಲ್ಲ ಎಂದು ಮಾಂಸದಂಗಡಿ ಮಾಲೀಕರೊಬ್ಬರು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here