ಪ್ಲಾಫ್ ಬ್ಯಾಟಿಂಗ್: ಕ್ಯಾಪ್ಟನ್ಸಿ ತೊರೆಯುವಂತೆ ರೋಹಿತ್ ಗೆ ಹೆಚ್ಚಿದ ಒತ್ತಡ! ಮುಂದೇನು?

0
Spread the love

ರಣಜಿ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್‌ ಆಟಗಾರ ರೋಹಿತ್​ ಶರ್ಮಾ ಫ್ಲಾಫ್‌ ಶೋ ಮುಂದುವರೆದಿದೆ. ದೇಶೀಯ ಟೂರ್ನಿಯಲ್ಲಿ ಮುಂಬೈ ಪರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಣಕ್ಕಿಳಿದಿದ್ದು, ಒಂದು ರನ್ ಗಳಿಸಲು ಪರದಾಡಿದ್ದಾರೆ.

Advertisement

ಲೋಕಲ್‌ ಬೌಲರ್‌ಗಳ ಎದುರು ರನ್‌ ಕಲೆ ಹಾಕುವಲ್ಲಿ ಕ್ಯಾಪ್ಟನ್ ರೋಹಿತ್​ ಎಡವಿದರು. ಫಾರ್ಮ್‌ ಕಂಡುಕೊಳ್ಳಲು ರಣಜಿ ಟ್ರೋಫಿ ಆಡಲು ಬಂದ ಇವರು ಇಲ್ಲೂ ರನ್​ ಬರ ಎದುರಿಸಿದರು. ಸಿಂಗಲ್‌ ಡಿಜಿಟ್‌ನಲ್ಲೇ ಆಟ ಮುಗಿಸಿದರು.

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮುಂಬೈ ತಂಡದ ಪರ ಇನಿಂಗ್ಸ್ ಆರಂಭಿಸಿದರು. ಆದರೆ, ಜಮ್ಮು ಕಾಶ್ಮೀರ್ ವಿರುದ್ಧ ಬಿಗ್‌ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ತಾನು ಎದುರಿಸಿದ 19 ಎಸೆತಗಳಲ್ಲಿ 3 ರನ್‌ ಬಾರಿಸಿ ಔಟ್ ಆದರು. ಈ ಮೂಲಕ ರಣಜಿ ಟ್ರೋಫಿಯಲ್ಲೂ ನಿರಾಸೆ ಕಂಡರು.

ಅಂತರಾಷ್ಟ್ರೀಯ ಕ್ರಿಕೆಟ್​ ಮಾತ್ರವಲ್ಲ ರಣಜಿಯಲ್ಲೂ ರೋಹಿತ್​ ವಿಫಲರಾದರು. ಹೀಗಾಗಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿರೋ ಕ್ಯಾಪ್ಟನ್​ ರೋಹಿತ್​ ಶರ್ಮಾ ಅವರನ್ನು ಟೀಮ್​ ಇಂಡಿಯಾದ ನಾಯಕತ್ವದಿಂದ ಕೆಳಗಿಳಿಸಿ ಎಂದು ಒತ್ತಾಯ ಮಾಡಲಾಗುತ್ತಿದೆ.


Spread the love

LEAVE A REPLY

Please enter your comment!
Please enter your name here