ವಿಮಾನ ದುರಂತ: ಕೇಂದ್ರ ವಿಮಾನಯಾನ ಸಚಿವರು ರಾಜೀನಾಮೆ ನೀಡಬೇಕು – ಈಶ್ವರ ಖಂಡ್ರೆ

0
Spread the love

ಬೆಂಗಳೂರು: ವಿಮಾನ ದುರಂತಕ್ಕೆ ಹೊಣೆ ಹೊತ್ತು ಕೇಂದ್ರ ವಿಮಾನಯಾನ ಸಚಿವರು ರಾಜೀನಾಮೆ ನೀಡಬೇಕು  ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ವಿಮಾನ ದುರಂತಕ್ಕೆ ಕೇಂದ್ರ ಸರ್ಕಾರ ಹೊಣೆ ಹೊತ್ತು ಕೂಡಲೇ ಕೇಂದ್ರ ವಿಮಾನಯಾನ ಸಚಿವರು ರಾಜೀನಾಮೆ ನೀಡಬೇಕು.

Advertisement

ಇದು ಒಂದು ಅತಿದೊಡ್ಡ ದುರಂತವಾಗಿದೆ. ಅತ್ಯಂತ ನೋವಿನ ಸಂಗತಿಯಾಗಿದೆ. ಇಂತಹ ದುರಂತ ನಡೆಯದಂತೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಈ ದುರಂತದ ಬಗ್ಗೆ ನಿಷ್ಪಕ್ಷಪಾತ ತನಿಖೆ ಕೈಗೊಂಡು ವರದಿ ಜನರ ಮುಂದೆ ಇಡಬೇಕು. ಆರ್‌ಸಿಬಿ ಗೆಲುವಿನ ಸಂಭ್ರಮದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೇಳುವವರು ಕುಂಭಮೇಳದ ಕಾಲ್ತುಳಿತಕ್ಕೂ ರಾಜೀನಾಮೆ ಕೇಳಬೇಕು. ಸಾವಿನಲ್ಲಿ ರಾಜಕೀಯ‌ ಮಾಡಬಾರದು ಬಿಜೆಪಿಗೆ ಟಾಂಗ್‌ ಕೊಟ್ಟರು.


Spread the love

LEAVE A REPLY

Please enter your comment!
Please enter your name here