ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಹಾಗೂ ಗದಗ-ಬೆಟಗೇರಿ ವೃತ್ತಿಪರ ನೇಕಾರರು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳ ಮೂಲಕ ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ವೃತ್ತಿಪರ ನೇಕಾರರಿಗೆ ಪ್ರತಿ ವರ್ಷದಂತೆ ನೇಕಾರ ಸಮ್ಮಾನ್ ಯೋಜನೆ ಸಹಾಯಧನ ಇನ್ನೂ ಸಂದಾಯವಾಗದೆ ಸರಕಾರ ವಿಳಂಬ ನೀತಿ ಅನುಸರಿಸುತ್ತಿದ್ದು, ಕೂಡಲೇ ಹಣ ಸಂದಾಯ ಮಾಡಬೇಕು. ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿಯನ್ನು ಶೀಘ್ರವೇ ಹಂಚಿಕೆ ಮಾಡಬೇಕು. ಕಟ್ಟಡ ಕಾರ್ಮಿಕ ಮಾದರಿಯಲ್ಲಿ ಕಟ್ಟಕಡೆಯ ನೇಕಾರನಿಗೂ ಸೌಲಭ್ಯಗಳು ದೊರೆಯುವಂತಾಗಬೇಕು. ಮುಂಬರುವ ಬಜೆಟ್‌ನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಗೆ 1500 ಕೋಟಿ ರೂಪಾಯಿಗಳ ವಿಶೇಷ ಅನುದಾನ ಒದಗಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ವಿರುಪಾಕ್ಷ ಐಲಿ, ರಾಜು ದಡಿ, ಬಸವರಾಜ ಕರಿ, ನಾರಾಯಣ ಗೋಟೂರ, ರಾಘು ನೀಲಿ, ರಾಘು ಗೋಟೂರ, ಈರಣ್ಣ ಕೋನಾ, ನಾರಾಯಣಪ್ಪ ಕ್ವಾಣಿ ಹಾಗೂ ಗದಗ-ಬೆಟಗೇರಿಯ ವೃತ್ತಿಪರ ನೇಕಾರರು ಇದ್ದರು.


