ಬೆಂಗಳೂರು: ದಯವಿಟ್ಟು ಈಗಲೇ ಕಪ್ ನಮ್ದೇ ಅಂತ ಹೇಳಬೇಡಿ ಎಂದು ಆರ್‌ಸಿಬಿ ಮಾಜಿ ನಾಯಕ ಅನಿಲ್ ಕುಂಬ್ಳೆ ತಂಡದ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಈಗಲೇ ಕಪ್ ನಮ್ದೇ ಅಂತ ಹೇಳಬೇಡಿ. ಗೆದ್ದ ಮೇಲೆ ಹೇಳೋಣ. ಆರ್‌ಸಿಬಿ ತಂಡ ಚೆನ್ನಾಗಿ ಆಡುತ್ತಿದೆ. ಎರಡು ಬೆಸ್ಟ್ ತಂಡಗಳು ಫೈನಲ್ ಪ್ರವೇಶಿಸಿವೆ. ನಾನು ಎರಡು ತಂಡವನ್ನು ಪ್ರತಿನಿಧಿಸಿದ್ದೆ. ಆರ್‌ಸಿಬಿ ಗೆಲ್ಲಬೇಕೆಂದು ನಾನು ಹಾರೈಸುತ್ತೇನೆ ಎಂದು ತಿಳಿಸಿದರು.
ಕೊಹ್ಲಿ ಉತ್ತಮವಾಗಿ ಆಡುತ್ತಿದ್ದು 600ಕ್ಕೂ ಅಧಿಕ ರನ್ ಹೊಡೆದಿದ್ದಾರೆ. ಸಂತೋಷದ ಸುದ್ದಿ ಏನೆಂದರೆ ಈ ಬಾರಿ ಹೊಸ ಐಪಿಎಲ್ ವಿನ್ನರ್ ಆಗುತ್ತಾರೆ. ಆರ್‌ಸಿಬಿ ಉತ್ತಮವಾಗಿ ಆಡುತ್ತಿದೆ. ಫೈನಲಿನಲ್ಲಿ ಆರ್‌ಸಿಬಿ ಗೆಲ್ಲಬೇಕು ಎಂದರು.