ಬೆಂಗಳೂರು: ಪ್ರಧಾನಿ ಮೋದಿಯವರು ಸೈನಿಕರ ಅಭಿಪ್ರಾಯ ಪಡೆದೇ ಕದನ ವಿರಾಮ ಘೋಷಿಸಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕದನ ವಿರಾಮದ ಬಗ್ಗೆ ಯಾರೋ ನಾಲ್ಕು ಜನ ತೀರ್ಮಾನ ಮಾಡುವುದಲ್ಲ.
ಇದು ಸೈನಿಕರು ತೆಗೆದುಕೊಂಡಿರುವ ತೀರ್ಮಾನ. ಪ್ರಧಾನಿ ಮೋದಿಯವರು ಸೈನಿಕರ ಅಭಿಪ್ರಾಯ ಪಡೆದೇ ಕದನ ವಿರಾಮ ಘೋಷಿಸಿದ್ದಾರೆ. ಇಷ್ಟು ಸಾಮಾನ್ಯ ಜ್ಞಾನ ಕಾಂಗ್ರೆಸ್‌ನವರಿಗೆ ಇದ್ದರೆ ಸಾಕು ಎಂದರು. ಪಹಲ್ಗಾಮ್ ಘಟನೆಗೆ ನಮ್ಮ ಸೈನಿಕರು ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಪ್ರಧಾನಿ ಮೋದಿಯವರು ನಿನ್ನೆ ಅಣ್ವಸ್ತ್ರಗಳಿಗೆಲ್ಲ ಭಾರತ ಬಗ್ಗಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನವರು ದೇಶದ ವಿಚಾರದಲ್ಲಿ ದ್ವಂದ್ವ ನೀತಿ ಪ್ರದರ್ಶನ ಮಾಡುವುದು ಬೇಡ. ಯುದ್ಧ ಆರಂಭಕ್ಕೂ ಮುನ್ನ ಯುದ್ಧದ ಅವಶ್ಯಕತೆ ಇದೆ ಎಂದಿದ್ದರು. ಯುದ್ಧ ಆರಂಭವಾದ ಮೇಲೆ ಶಾಂತಿ ಎಂದರು. ಯುದ್ಧ ನಿಲ್ಲಿಸಿದಾಗ ಯುದ್ಧ ಮಾಡಬೇಕಿತ್ತು ಎನ್ನುತ್ತಿದ್ದಾರೆ. ಇದು ಸರಿಯಲ್ಲ ಎಂದರು.