ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಿತಿನ್ ನಬಿನ್ ಅವರನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ಅವರು ಪಕ್ಷದ ಪರಂಪರೆಯನ್ನು ಮುಂದುವರಿಸುವ ಮಿಲೇನಿಯಲ್ ನಾಯಕ ಎಂದು ಬಣ್ಣಿಸಿದ್ದಾರೆ.
“ಪಕ್ಷದ ವಿಚಾರ ಬಂದರೆ ನಿತಿನ್ ನಬಿನ್ ಅವರೇ ಬಾಸ್. ನಾನು ಕೇವಲ ಬಿಜೆಪಿ ಕಾರ್ಯಕರ್ತ” ಎಂದು ಹೇಳಿದ ಮೋದಿ ಮಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಜೆಪಿ ಹೊಸಬರಿಗೆ ಅವಕಾಶ ನೀಡುವ ಪಕ್ಷ. ಅಧ್ಯಕ್ಷರ ಹೊಣೆಗಾರಿಕೆ ಪಕ್ಷಕ್ಕೆ ಮಾತ್ರ ಸೀಮಿತವಲ್ಲ, ಎನ್‌ಡಿಎ ಒಕ್ಕೂಟದಲ್ಲಿ ಸಮನ್ವಯ ಸಾಧಿಸುವುದೂ ಅವರ ಕರ್ತವ್ಯ ಎಂದು ಮೋದಿ ಸ್ಪಷ್ಟಪಡಿಸಿದರು.
ನಿತಿನ್ ನಬಿನ್ ಬಗ್ಗೆ ಮಾತನಾಡಿದ ಮೋದಿ, “ಅವರು ರೇಡಿಯೋ ಯುಗದಿಂದ ಎಐ ಯುಗದವರೆಗೆ ಬದಲಾವಣೆಗಳನ್ನು ಕಂಡ ಪೀಳಿಗೆಯವರು. ಯುವ ಉತ್ಸಾಹವೂ ಇದೆ, ಸಂಘಟನಾ ಅನುಭವವೂ ಇದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಲ್ಲದೇ, “ಬಿಜೆಪಿ ಒಂದು ಕುಟುಂಬ. ಇಲ್ಲಿ ಮೆಂಬರ್‌ಶಿಪ್‌ಗಿಂತ ರಿಲೇಷನ್‌ಶಿಪ್ ಮುಖ್ಯ. ನಾಯಕತ್ವ ಬದಲಾಗಬಹುದು, ಆದರೆ ನಮ್ಮ ದಿಕ್ಕು ಮತ್ತು ಆದರ್ಶಗಳು ಒಂದೇ” ಎಂದು ಮೋದಿ ಹೇಳಿದರು.



