ದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ಎರಡು ಹೊಸ ಮೆಟ್ರೋ ಕಾರಿಡಾರ್‌ಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ 33,500 ಕೋಟಿ ರೂ. ಮೌಲ್ಯದ ಇತರ ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಪಿಂಕ್ ಲೈನ್‌ನಲ್ಲಿ 12.3 ಕಿ.ಮೀ.ದ ಮಜ್ಲಿಸ್ ಪಾರ್ಕ್–ಮೌಜ್‌ಪುರ್–ಬಾಬರ್‌ಪುರ್ ಕಾರಿಡಾರ್ ಮತ್ತು ಮೆಜೆಂಟಾ ಲೈನ್‌ನಲ್ಲಿ 9.9 ಕಿ.ಮೀ.ದ ದೀಪಾಲಿ ಚೌಕ್–ಮಜ್ಲಿಸ್ ಪಾರ್ಕ್ ವಿಸ್ತರಣೆಯ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಪಿಂಕ್ ಲೈನ್ ವಿಸ್ತರಣೆಯು ಬುರಾರಿ, ಜಗತ್‌ಪುರ್-ವಜೀರಾಬಾದ್, ಖಜುರಿ ಖಾಸ್, ಭಜನ್‌ಪುರ ಮತ್ತು ಯಮುನಾ ವಿಹಾರ್ ಪ್ರದೇಶಗಳಿಗೆ ಸೇವೆ ನೀಡುತ್ತದೆ. ಇದರಿಂದ ದೆಹಲಿಗೆ ಸಂಪೂರ್ಣ ಕಾರ್ಯನಿರ್ವಹಿಸುವ ರಿಂಗ್ ಮೆಟ್ರೋ ಸಿದ್ಧವಾಗಿದೆ.
ಈ ಸೇರ್ಪಡೆ ದೆಹಲಿಯ ಈಶಾನ್ಯ ಮತ್ತು ವಾಯುವ್ಯ ಭಾಗಗಳ ನಡುವಣ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ದಟ್ಟಣೆಯನ್ನು ನಿವಾರಣೆಗೆ ಸಹಾಯ ಮಾಡುತ್ತದೆ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ. ಮೆಜೆಂಟಾ ಲೈನ್ ವಿಸ್ತರಣೆಯು ಜಾಲವನ್ನು ಸುಮಾರು 49 ಕಿ.ಮೀ.ಗೆ ವಿಸ್ತರಿಸುತ್ತದೆ ಮತ್ತು ಮಧುಬನ್ ಚೌಕ್, ಉತ್ತರ ಪಿತಂಪುರಾ–ಪ್ರಶಾಂತ್ ವಿಹಾರ್, ಹೈದರ್ಪುರ್ ಬದ್ಲಿ ಮೋರ್, ಭಾಲಸ್ವಾ ಮುಂತಾದ ವಸತಿ ಕೇಂದ್ರಗಳನ್ನು ಸಂಪರ್ಕಿಸುತ್ತದೆ.
ಈ ಸೇರ್ಪಡೆಗಳು ವಾಣಿಜ್ಯ ಮತ್ತು ವಸತಿ ವಲಯಗಳನ್ನು ಹೇಗೆ ಸಂಯೋಜಿಸುತ್ತವೆ, ಸುಗಮ, ಪರಿಸರ ಸ್ನೇಹಿ ಪ್ರಯಾಣವನ್ನು ಉತ್ತೇಜಿಸುತ್ತವೆ ಮತ್ತು ಖಾಸಗಿ ವಾಹನಗಳ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುತ್ತವೆ ಎಂಬುದನ್ನು ಮುಖ್ಯಮಂತ್ರಿ ಗುಪ್ತಾ ಒತ್ತಿ ಹೇಳಿದರು.



