ಹುಟ್ಟು ಹಬ್ಬದ ಸಂಭ್ರಮದಲ್ಲಿ ಸಂಸದ ಬೊಮ್ಮಾಯಿ: ಶುಭಕೋರಿದ ಪ್ರಧಾನಿ ಮೋದಿ

0
Spread the love

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿಯವರ 65 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಸವರಾಜ ಬೊಮ್ಮಾಯಿಯವರಿಗೆ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

Advertisement

ಈ ಕುರಿತು ಪತ್ರ ಬರೆದಿರುವ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬ ಎನ್ನುವುದು ಜೀವನದ ಅನುಭವದ ಸ್ಪೂರ್ತಿ ಪಡೆದು ಭವಿಷ್ಯದ ಕಡೆಗೆ ನಡೆಯುವ ಸುಸಂದರ್ಭ. ಹುಟ್ಟು ಹಬ್ಬ ದೇಶ ಮತ್ತು ಸಮಾಜದ ಏಳಿಗೆಗಾಗಿ ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಹೊಸ ಸ್ಪೂರ್ತಿ ಮತ್ತು ಶಕ್ತಿ ನೀಡುತ್ತದೆ.

ದೇಶದ ಅಮೃತ ಕಾಲದ ಈ ಸಂದರ್ಭದಲ್ಲಿ ನಾವು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಕಡೆಗೆ ನಾವು ಹೆಜ್ಜೆ ಹಾಕುತ್ತಿದ್ದೇವೆ. ರಾಜ್ಯದ ಪ್ರಗತಿಗೆ ನಿಮ್ಮ  ಅಭೂತಪೂರ್ವ ಕೊಡುಗೆ ಶ್ಲಾಘನೀಯವಾಗಿದೆ. ನಿಮ್ಮ ಜೀವನದಲ್ಲಿ ಸದಾ ಶಾಂತಿ, ಸಂತೋಷ, ನೆಮ್ಮದಿ ತುಂಬಿರಲಿ ಎಂದು  ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.


Spread the love

LEAVE A REPLY

Please enter your comment!
Please enter your name here