ಜಿಎಸ್‌ಟಿ ಸುಧಾರಣೆಗಳ ಕುರಿತು ಪ್ರಧಾನಿ ಮೋದಿ ಭಾಷಣ: ‘ನಮೋ’ ಹೇಳಿದ್ದಿಷ್ಟು!

0
Spread the love

ನವದೆಹಲಿ:- ಜಿಎಸ್‌ಟಿ ಸುಧಾರಣೆಗಳ ಕುರಿತು ಪ್ರಧಾನಿ ಮೋದಿ ಭಾಷಣ ಮಾಡಿದ್ದು, ತೆರಿಗೆ ಸ್ಲ್ಯಾಬ್‌ಗಳನ್ನು ಶೇ. 5 ಮತ್ತು 18ಕ್ಕೆ ಸರಳಗೊಳಿಸುವ ಜಿಎಸ್‌ಟಿ ಮಂಡಳಿಯ ಕ್ರಮವನ್ನು ಸ್ವಾಗತಿಸಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಸುಧಾರಣೆಗಳನ್ನು ಭಾರತದ ಬೆಳವಣಿಗೆಗೆ ಡಬಲ್ ಡೋಸ್ ಆಗಿದೆ ಎಂದು ಶ್ಲಾಘಿಸಿದ್ದಾರೆ. “GST ಸ್ವತಂತ್ರ ಭಾರತದ ಅತಿದೊಡ್ಡ ಆರ್ಥಿಕ ಸುಧಾರಣೆಗಳಲ್ಲಿ ಒಂದಾಗಿತ್ತು. ವಾಸ್ತವವಾಗಿ, ಈ ಸುಧಾರಣೆಗಳು ದೇಶಕ್ಕೆ ಬೆಂಬಲ ಮತ್ತು ಬೆಳವಣಿಗೆಯ ಡಬಲ್ ಡೋಸ್ ಆಗಿದೆ. ಒಂದೆಡೆ, ದೇಶದ ಸಾಮಾನ್ಯ ಜನರು ಹಣವನ್ನು ಉಳಿಸುತ್ತಾರೆ, ಮತ್ತೊಂದೆಡೆ, ದೇಶದ ಆರ್ಥಿಕತೆಯನ್ನು ಬಲಪಡಿಸಲಾಗುತ್ತದೆ” ಎಂದಿದ್ದಾರೆ.

ಬುಧವಾರ ರಾತ್ರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವ್ಯಾಪಕ ಶ್ರೇಣಿಯ ಗ್ರಾಹಕ ಅಗತ್ಯ ವಸ್ತುಗಳು, ಔಷಧಿಗಳು ಮತ್ತು ವಾಹನಗಳ ಮೇಲಿನ ತೆರಿಗೆಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು. ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ತರ್ಕಬದ್ಧಗೊಳಿಸುವ ಜಿಎಸ್‌ಟಿ ಕೌನ್ಸಿಲ್‌ನ ಮಹತ್ವದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇದು ಈ ವರ್ಷದ ನವರಾತ್ರಿಯಿಂದ ಜಾರಿಗೆ ಬರಲಿರುವ ಮುಂದಿನ ಪೀಳಿಗೆಯ ಸುಧಾರಣೆಗಳು ಎಂದು ಅವರು ಕರೆದಿದ್ದಾರೆ. “ಈಗ ಜಿಎಸ್‌ಟಿ ಇನ್ನೂ ಸರಳವಾಗಿದೆ. ಕೇವಲ 5% ಮತ್ತು 18% ಈ ಎರಡು ಸ್ಲ್ಯಾಬ್‌ಗಳು ಉಳಿದಿವೆ. ಇದು ಪ್ರತಿಯೊಬ್ಬ ನಾಗರಿಕರ ವ್ಯವಹಾರಕ್ಕೆ ಸುಲಭವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here