ಕೋರ್ಟ್ ಕಟ್ಟಡದ ಮೇಲಿಂದ ಜಿಗಿದು ಪೋಕ್ಸೋ ಕೇಸ್ ಆರೋಪಿ ಆತ್ಮಹತ್ಯೆ!

0
Spread the love

ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಆರೋಪಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಗೌತಮ್ ಎಂಬ ಆರೋಪಿ ಕೋರ್ಟ್‌ನ 5ನೇ ಫ್ಲೋರ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ.

Advertisement

ಪರಪ್ಪನ ಅಗ್ರಹಾರದಿಂದ ಆರೋಪಿಯನ್ನು ವಿಚಾರಣೆಗೆ ಕೋರ್ಟಿಗೆ ಕರೆತರುವ ವೇಳೆ ಈ ಘಟನೆ ಸಂಭವಿಸಿದೆ. ಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆ.

ಪೋಕ್ಸೊ ಕೇಸಲ್ಲಿ ಆರೋಪಿಯನ್ನ ಕೋರ್ಟ್‌ಗೆ ಕರೆತರಲಾಗಿತ್ತು. ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನ ಕೋರ್ಟ್ಗೆ ಕರೆತಂದಾಗ ಕುಟುಂಬದವರು ಕೂಡ ಉಪಸ್ಥಿತರಿದ್ದರು. ಅವಮಾನ ತಾಳಲಾರದೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.


Spread the love

LEAVE A REPLY

Please enter your comment!
Please enter your name here