ಚಿತ್ರದುರ್ಗ:- ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾಶ್ರೀ ಅವರ ವಿಚಾರಣೆಯನ್ನು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆಗಸ್ಟ್ 1ಕ್ಕೆ ಮುಂದೂಡಿಕೆ ಮಾಡಿದೆ.
Advertisement
ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಬಸವರಾಜನ್ ವಿರುದ್ಧ ಎ1 ಮುರುಘಾಶ್ರೀ ಕೋರ್ಟ್ ಎದುರು ಹೇಳಿಕೆ ದಾಖಲಿಸುವಾಗ ಷಡ್ಯಂತ್ರ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಬಸವರಾಜನ್ ಹೇಳಿಕೆ ದಾಖಲಿಸಲು ಸರ್ಕಾರಿ ವಕೀಲ ಜಗದೀಶ್ ಕೋರಿದ್ದ ಮನವಿ ತಿರಸ್ಕಾರಗೊಂಡಿದೆ.
ಹೀಗಾಗಿ ಸರ್ಕಾರಿ ವಕೀಲ ಜಗದೀಶ್ ಅವರು ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿದ್ದು, ಹೀಗಾಗಿ ಮುರುಘಾಶ್ರೀ ಕೇಸ್ ವಿಚಾರಣೆಯನ್ನು ಆ.1ಕ್ಕೆ ನ್ಯಾಯಾಲಯ ಮುಂದೂಡಿದೆ.