ವಿಶ್ವಪಥದತ್ತ ಮುನ್ನಡೆಸಿದ ಕವಿ ಕುವೆಂಪು: ವಿವೇಕಾನಂದಗೌಡ ಪಾಟೀಲ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: 20ನೇ ಶತಮಾನ ಕಂಡ ದೈತ್ಯ ಪ್ರತಿಭೆ, ವರಕವಿ ಬೇಂದ್ರೆಯವರಿAದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡು ವಿಶ್ವಮಾನವ ಸಂದೇಶವನ್ನು ನೀಡಿ ಕನ್ನಡ ಸಾಹಿತ್ಯಕ್ಕೆ ಕಳಸಪ್ರಾಯದ ರೀತಿಯಲ್ಲಿ ಕೊಡುಗೆ ನೀಡಿದವರು ಕುವೆಂಪು. ಮಲೆನಾಡಿನ ರಮ್ಯ ಪರಿಸರದಲ್ಲಿ ಜನ್ಮತಾಳಿದರೂ ಜನಪರ ಕಾಳಜಿಯ ಬರಹಗಾರರಾಗಿ ಗೋಚರಿಸುತ್ತಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ತಿಳಿಸಿದರು.

Advertisement

ಅವರು ಜಿಲ್ಲಾ ಕಸಾಪದಿಂದ ರಾಷ್ಟçಕವಿ ಕುವೆಂಪು ಜನ್ಮದಿನೋತ್ಸವ ಹಾಗೂ ವಿಶ್ವಮಾನವ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಹುಟ್ಟತ್ತಲೇ ವಿಶ್ವಮಾನ್ಯತೆಯನ್ನು ಪಡೆದ ಮಗು ಬೆಳೆಯುತ್ತಾ ಅನೇಕ ಸಂಕೋಲೆಗಳನ್ನು ತಾಕಿಸಿಕೊಂಡು ಅಲ್ಪ ಮಾನವನಾಗುತ್ತದೆ. ಮತ್ತೆ ವಿಶ್ವಮಾನವನಾಗುವತ್ತ ನಮ್ಮ ಪಯಣ ಸಾಗಬೇಕು ಎಂಬ ಆಶಯವನ್ನು ಹೊತ್ತು ಸಾಹಿತ್ಯ ಸೃಷ್ಟಿಸಿದ್ದಾರೆ. ಅವರು ರೂಪಿಸಿದ ಮನುಜಮತ ವಿಶ್ವ ಪಥದ ಕಲ್ಪನೆ ದೇಶ, ಭಾಷೆಯನ್ನು ಮೀರಿದ್ದಾಗಿದೆ. ಕಾವ್ಯ, ಕತೆ, ಕಾದಂಬರಿ, ನಾಟಕ, ಪ್ರಬಂಧ ಹೀಗೆ ವಿವಿಧ ಆಯಾಮಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿ ಜನಮಾನಸವನ್ನು ತಿದ್ದಿ ತೀಡುವ ಕಾರ್ಯವನ್ನು ಬರೆಹದ ಮೂಲಕ ಮಾಡಿದ್ದಾರೆ ಎಂದು ತಿಳಿಸಿದರು.

ಶರಣೆ ರತ್ನಕ್ಕ ಪಾಟೀಲ ಮಾತನಾಡಿ, ಮೂಢನಂಬಿಕೆಗಳನ್ನು ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ವಿರೋಧಿಸಿ ತಮ್ಮ ಬರಹದಲ್ಲಿ ತೋರ್ಪಡಿಸಿದರು. ಶುದ್ಧವಾದ ಆಧ್ಯಾತ್ಮದ ಬದುಕನ್ನು ಬದುಕಿದರು, ಸತ್ಯ ಪ್ರತಿಪಾದಕಾರಗಿದ್ದರು. ಮನುಷ್ಯ ಜಾತಿ ತಾನೊಂದೆ ವಲಂ ಎನ್ನುವಂತೆ ವಿಶ್ವಮಾನವ ಪ್ರಜ್ಞೆಯನ್ನು ತಂದರು ಎಂದು ನುಡಿದರು.

ವೇದಿಕೆ ಮೇಲೆ ಸಾಹಿತಿ ಬಿ.ಎಲ್. ಪತ್ತಾರ, ಸಿ.ಎಂ. ಪತ್ತಾರ, ಆನಂದ ಹಡಪದ ಉಪಸ್ಥಿತರಿದ್ದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ಬಾಪುರಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here