ಮತ್ತೆ ಬಂದಿದೆ
ಚುನಾವಣೆ
ಆಗಲಿದೆ ಹಣದ
ಚಲಾವಣೆ
ಮತದಾರರ ಮೇಲೆ
ಸುರಿಯಲಿದೆ
ಭರವಸೆಗಳ
ಸುರಿಮಳೆ
ಕಾಣಲಿದೆ ಮತದಾರರ
ಮುಖದಲ್ಲಿ
ಸಂತಸದ
ಕಳೆ
ಚುನಾವಣೆಯ ನಂತರ
ಹುಸಿಯಾಗಲಿದೆ
ಅಭ್ಯರ್ಥಿಗಳು
ನೀಡಿದ
ಭರವಸೆ
ಕಾಣಲಿದೆ ಮತದಾರರ
ಮುಖದಲ್ಲಿ
ಭಾರೀ
ನಿರಾಸೆ
ಆಮಿಷಕ್ಕೆ ಒಳಗಾಗದೇ
ಯೋಚಿಸಿ
ಮತ ನೀಡಿ
ಯೋಗ್ಯ ವ್ಯಕ್ತಿಗೆ
ಆಗ ಮಾತ್ರ
ಸಾಧ್ಯ
ದೇಶದ
ಏಳಿಗೆ
– ಎಚ್.ಆರ್. ವಸ್ತ್ರದ.
ಧಾರವಾಡ.



