ಮಂಡ್ಯ:- ಜಿಲ್ಲೆಯ ಪಾಂಡವಪುರದ ಸುಂಡಳ್ಳಿ ಗ್ರಾಮದಲ್ಲಿ ಕಿಡಿಗೇಡಿಗಳು ಹೂವಿನ ತೋಟಕ್ಕೆ ವಿಷಪ್ರಾಶನ ಹಾಕಿರುವ ಘಟನೆ ಜರುಗಿದೆ.
Advertisement
ಹಳೆ ದ್ವೇಷದ ಹಿನ್ನೆಲೆ ಈ ಕೃತ್ಯ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ರೂ ಮೌಲ್ಯದ ಗಿಡಗಳು ಸಾವನ್ನಪ್ಪಿವೆ. ಸುಮಾರು 2 ಎಕರೆ ಪ್ರದೇಶದಲ್ಲಿ ರೈತ ಮಧು ಅವರು ಬೆಳೆದಿದ್ದ ಹೂವಿನ ತೋಟದಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಘಟನೆಯಿಂದ ಲಕ್ಷಾಂತರ ರೂ. ಹಣ ನಷ್ಟವಾಗಿದ್ದು, ರೈತ ಕಂಗಾಲಾಗಿದ್ದಾನೆ. ಕಿಡಿಗೇಡಿಗಳ ವಿರುದ್ದ krs ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.