ಮೊರಾಕೊ: ಪಿಒಕೆ ಒಂದಲ್ಲಾ ಒಂದು ದಿನ ಭಾರತಕ್ಕೆ ಸೇರೇ ಸೇರುತ್ತೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಮೊರಾಕೋದಲ್ಲಿ ಮಾತನಾಡಿದ ಅವರು,ಮುಂದೊಂದು ದಿನ ಪಿಒಕೆ ʻನಾನು ಭಾರತʼ ಎಂದು ಹೇಳುವ ದಿನಗಳು ಬಂದೇ ಬರುತ್ತವೆ. ಅಲ್ಲಿನ ಜನ ಭಾರತದೊಂದಿಗೆ ಸೇರಲು ಕಾತರದಿಂದ ಕಾಯುತ್ತಿದ್ದಾರೆ. ಪಿಒಕೆ ವಶಕ್ಕೆ ಭಾರತ ಯುದ್ಧ ಮಾಡಬೇಕಿಲ್ಲ, ಬದಲಿಗೆ ಶಾಂತಿ ಮಾರ್ಗದಲ್ಲೇ ಆ ಪ್ರದೇಶ ತಾನಾಗಿಯೇ ಭಾರತವನ್ನು ಸೇರಿಕೊಳ್ಳುತ್ತದೆ ಹೇಳಿದ್ದಾರೆ.
ಐದು ವರ್ಷಗಳ ಹಿಂದೆ ಕಾಶ್ಮೀರ ಕಣಿವೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಾನು ಭಾರತೀಯ ಸೇನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ. ಆಗಲೂ ನಾನು ಪಿಒಕೆ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ. ಈಗಿನ ಪರಿಸ್ಥಿತಿಗಳು ನನ್ನ ಹೇಳಿಕೆಗೆ ಪೂರಕವಾಗಿದ್ದು, ಪಿಒಕೆ ಶೀಘ್ರದಲ್ಲೇ ʻನಾನು ಭಾರತʼ ಎಂದು ಘೋಷಿಸಿಕೊಳ್ಳಲಿದೆ” ಎಂದು ರಕ್ಷಣಾ ಸಚಿವರು ಭರವಸೆ ವ್ಯಕ್ತಪಡಿಸಿದರು.