ಪ್ರೀತಿ ನಿರಾಕರಿಸಿದ ಯುವತಿಗೆ ಚಾಕು ಇರಿದು ಹಲ್ಲೆ: ಕಾಮುಕ ಟೆಕ್ಕಿ ಬಂಧಿಸಿದ ಪೊಲೀಸ್!

0
Spread the love

ಬೆಂಗಳೂರು:- ಪ್ರೀತಿ ನಿರಾಕರಿಸಿದ ಯುವತಿಗೆ ಕಾಮುಕ ಟೆಕ್ಕಿಯೋರ್ವ ಚಾರು ಇರಿದು ಹಲ್ಲೆ ನಡೆಸಿದ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಘಟನೆ ಸಂಬಂಧ ಕಾಮುಕ ಟೆಕ್ಕಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

45 ವರ್ಷದ ಶ್ರೀಕಾಂತ್ ಬಂಧಿತ ಟೆಕ್ಕಿ. ಶ್ರೀಕಾಂತ್‌ಗೆ ಈ ಹಿಂದೆ ಮದುವೆಯಾಗಿದ್ದು, ಆತನ ಮನೆಯಲ್ಲಿ ಬಾಡಿಗೆಗೆ ಇದ್ದ 20 ವರ್ಷದ ಕಾಲೇಜು ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದನು. ಈ ಬಗ್ಗೆ ಯುವತಿಯು ಆತನ ಪತ್ನಿಗೆ ದೂರು ನೀಡಿದ್ದಳು. ಆದರೆ ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಯುವತಿಯು ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಟೆಕ್ಕಿಯು ಕೋಪಗೊಂಡಿದ್ದ.

ಕಳೆದ 3 ದಿನಗಳ ಹಿಂದೆ ಯುವತಿ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಬೇರೊಬ್ಬ ಯುವಕನೊಂದಿಗೆ ನಿಂತಿದ್ದಳು. ಇದನ್ನೂ ಟೆಕ್ಕಿ ಗಮನಿಸಿದ್ದ. ಬೇರೊಬ್ಬ ಯುವಕನೊಂದಿಗೆ ಪ್ರೀತಿ ಇರುವುದಕ್ಕೆ ನಿರಾಕರಿಸುತ್ತಿದ್ದೀಯಾ ಎಂದು ಟೆಕ್ಕಿಯು ಯುವಕ ಯುವತಿಗೆ ಚಾಕು ಹಾಕಿದ್ದ.

ನೊಂದ ಯುವತಿಯು ಟೆಕ್ಕಿಯ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಅನ್ವಯ ಆರೋಪಿಯನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here