ರೋಡ್ ನಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.
ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡ ಮಚ್ಚು ಹಿಡಿದು ರಸ್ತೆಯಲ್ಲಿ ರೀಲ್ಸ್ ಮಾಡಿದ್ದರು. ಖಾಸಗಿ ಕಾರ್ಯಕ್ರಮಕ್ಕಾಗಿ ಇಬ್ಬರು ಈ ರೀಲ್ಸ್ ಮಾಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ವಿಡಿಯೋ ವೈರಲ್ ಆದ ಬಳಿಕ ಬಸವೇಶ್ವರ ನಗರ ಪೊಲೀಸರು, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ಬಳಿಕ ಜಾಮೀನಿನ ಮೂಲಕ ಹೊರ ಬಂದಿದ್ದರು.
ವಿಚಾರಣೆ ವೇಳೆ ರೀಲ್ಸ್‌ಗೆ ಬಳಸಿದ್ದ ಮಚ್ಚು ಫೈಬರ್ ಎಂದು ಹೇಳಿದ್ದರು. ಜೊತೆಗೆ ಫೈಬರ್ ಮಚ್ಚನ್ನೇ ಪೊಲೀಸರಿಗೆ ನೀಡಿ ತನಿಖೆಯ ದಿಕ್ಕು ತಪ್ಪಿಸಿದ್ದರು. ಇಲ್ಲಿಯವರೆಗೂ ರೀಲ್ಸ್‌ಗೆ ಬಳಸಿದ ಅಸಲಿ ಮಚ್ಚನ್ನು ಪೊಲೀಸರಿಗೆ ಕೊಟ್ಟಿರಲಿಲ್ಲ. ಹಾಗಾಗಿ ಆ ಮಚ್ಚಿನ ಬಗ್ಗೆ ಮಾಹಿತಿ ನೀಡುವಂತೆ ರಜತ್‌ಗೆ ನೋಟಿಸ್ ನೀಡಿದ್ದು, ಇಂದು 11 ಗಂಟೆಗೆ ವಿಚಾರಣೆ ಬರಲು ಸೂಚಿಸಿದ್ದಾರೆ.