ಬೆಂಗಳೂರು: ಮನೆಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಅಲ್ ಮೋಹಿನ್ ಮುಲ್ಲಾ (23), ಮೊಹಮ್ಮದ್ ಶಾರಿಫ್(24) ಬಂಧಿತ ಆರೋಪಿಗಳು. ಕದ್ದ ಬೈಕ್ ನಲ್ಲಿ ಏರಿಯಾಗಳ ರೌಂಡ್ ಹಾಕುತಿದ್ದ ಆರೋಪಿಗಳು. ಬೆಳಗ್ಗೆ ಖಾಲಿ ಇರುವ ಮನೆಗಳನ್ನು ನೋಡಿ ಕಳ್ಳತನ ಮಾಡುತ್ತಿದ್ದರು.
Advertisement
ರಾತ್ರಿ ವೇಳೆ ಚಿಂದಿ ಆಯುವ ನೆಪದಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದರು. ಮನೆಯೊಂದರಿಂದ 100 ಗ್ರಾಂ ಚಿನ್ನ, ನಾಲ್ಕು ವಾಚ್ ಗಳನ್ನು ಕಳವು ಮಾಡಿದ್ದ ಆರೋಪಿಗಳಿಂದ 76 ಗ್ರಾಂ ಚಿನ್ನ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ. ಇನ್ನೂ ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.