ಬೆಂಗಳೂರು: ವೈಟ್ ಫೀಲ್ಡ್ ಪೊಲೀಸರ ಕಾರ್ಯಾಚರಣೆ ನಡೆಸಿ ಮನೆಗಳವು ಮಾಡ್ತಿದ್ದ ಮನೆಕೆಲಸ ದಾಕೆಯನ್ನು ಬಂಧಿದುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ಮೂಲದ ಪಿಂಕಿದೇವಿ ಬಂಧಿತ ಆರೋಪಿತೆಯಾಗಿದ್ದು, ಸಾಫ್ಟ್ ವೇರ್ ಉದ್ಯೋಗಿ ಮನೆಯಲ್ಲಿ ಕೆಲಸಕ್ಕಿದ್ದ ಪಿಂಕಿದೇವಿ, ಕೆಲಸ ಮಾಡಿಕೊಂಡೇ ಮನೆಯಲ್ಲಿರುವ ಚಿನ್ನಾಭರಣಗಳನ್ನು ಕದ್ದು ಬಿಹಾರಕ್ಕೆ ಪರಾರಿಯಾಗಿದ್ದಳು.
ಇನ್ನೂ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಬಿಹಾರಕ್ಕೆ ತೆರಳಿ ಆರೋಪಿತೆಯನ್ನ ಬಂಧಿಸಿ ಕರೆತಂದಿದ್ದಾರೆ. ಇನ್ನೂ ಬಂಧಿತ ಆರೋಪಿತೆಯಿಂದ 54 ಲಕ್ಷ ಮೌಲ್ಯದ 570 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



