ಮಂಡ್ಯ: ಮಂಡ್ಯದ ಬೆಳ್ಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬೆಳ್ಳೂರು ಸೇರಿ ಹಲವೆಡೆ ಸರಗಳ್ಳತನ ನಡೆಸಿದ ಸರಗಳ್ಳನನ್ನು ಬಂಧಿಸಿದ್ದಾರೆ. ತುಮುಕೂರು ಮೂಲದ ಭರತ್(33) ಬಂಧಿತ ಆರೋಪಿಯಾಗಿದ್ದು,
ಆ-15 ರಂದು ನಾಗಮಂಗಲದ ವಡ್ಡರಹಳ್ಳಿ ಕಿರಣ್ ಕತ್ತಿನಿಂದ 30 ಗ್ರಾಂ ನ ಸರ ಕಳವು ಮಾಡಲಾಗಿತ್ತು. ಆ ದಿನ ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸರಿಗೆ ಕಿರಣ್ ನಿಂದ ದೂರು ನೀಡಲಾಗಿದ್ದು,
ದೂರು ಆಧರಿಸಿ ಕಾರ್ಯಾಚರಣೆ ಮೂಲಕ ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 7 ಲಕ್ಷ ರೂ ಮೌಲ್ಯದ 70 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.



