ಗೃಹ ಸಚಿವ ನಿವಾಸದ ಮುಂದೆ ಪೊಲೀಸರ ದಬ್ಬಾಳಿಕೆ! ಜಿ.ಪರಮೇಶ್ವರ್ ಹೇಳಿದ್ದೇನು..?

0
Spread the love

ಬೆಂಗಳೂರು: ಶಾಂತಿಯುತವಾಗಿ ಗೃಹ ಸಚಿವರ ಮನೆ ಮುಂದೆ ಮನವಿ ಸಲ್ಲಿಸಲು ಪೊಲೀಸ್ ಕಾನ್ಸ್‌ಟೇಬಲ್ ಆಕಾಂಕ್ಷಿಗಳು ನಿಂತಿದ್ದರು. ಈ ವೇಳೆ ಏಕಾಏಕಿ ಪೊಲೀಸರು ಆಕಾಂಕ್ಷಿಗಳನ್ನು ಗೃಹ ಸಚಿವರ ನಿವಾಸದಿಂದ ಬಲವಂತವಾಗಿ ಕರೆದೊಯ್ದು ಪೊಲೀಸ್ ವಾಹನಕ್ಕೆ ತುಂಬಿಸಲಾಯಿತು. ಇದೇ ವೇಳೆ ಪಿಎಸ್‌ಐ ಪರೀಕ್ಷೆ ಮುಂದಕ್ಕೆ ಹಾಕುವಂತೆ ಮನವಿ ಮಾಡಲು ಬಂದ ಅಭ್ಯರ್ಥಿಯೊಬ್ಬರನ್ನು ಬಲವಂತವಾಗಿ ವಶಕ್ಕೆ ಪಡೆದರು.

Advertisement

ಅಭ್ಯರ್ಥಿ ಕಾಂತಕುಮಾರ್ ಗೃಹ ಸಚಿವರಿಗೆ ಮನವಿ ಕೊಡಲು ಬಂದಾಗ, ಇನ್ಸ್​ಪೆಕ್ಟರ್​ ಒಬ್ಬರು ಪಿಎಸ್ಐ ಅಭ್ಯರ್ಥಿಯ ಕೊರಳಪಟ್ಟಿ ಹಿಡಿದು ಜೀಪಿನೊಳಗೆ ತಳ್ಳಿ ಕರೆದೊಯ್ದರು. ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳ ಕೋರಿ ಬಂದಿದ್ದ ಹತ್ತಾರು ಆಕಾಂಕ್ಷಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಅಹವಾಲು ಕೊಡಲು ಬಂದ ಆಕಾಂಕ್ಷಿಗಳ ಮೇಲೆ ದಬ್ಬಾಳಿಕೆ ಮೆರೆದ ಇನ್ಸ್​ಪೆಕ್ಟರ್ ಅವರನ್ನು​ ಕರೆದು ಬುದ್ಧಿ ಹೇಳಿದ ಪರಮೇಶ್ವರ್, ಹಾಗೆಲ್ಲ ಮಾಡಬೇಡಿ. ಅರ್ಜಿ ಕೊಡಲು ಬಂದವರಿಗೆ ತಡೆಯಬೇಡಿ, ಸುಮ್ನಿರಿ, ಬಿಟ್ಬಿಡಿ ಅವರನ್ನು ಎಂದು ಸೂಚಿಸಿದರು.

ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸುತ್ತಾ, ಯಾರೇ ಅರ್ಜಿ ಕೊಟ್ಟರೂ ನಾನೇ ಖುದ್ದಾಗಿ ತಗೋತೀನಿ. ಅದಕ್ಕೆ ಸಂಬಂಧಪಟ್ಟವರಿಗೆ ಅರ್ಜಿಗಳನ್ನು ಕಳಿಸ್ತೇವೆ. ಸಮಯ ಇದ್ರೆ ಇಲ್ಲೇ ಬರೆದು ಕಳಿಸ್ತೇನೆ. ದೌರ್ಜನ್ಯ ಸರಿ ಅಲ್ಲ. ಆ ರೀತಿ ದೌರ್ಜನ್ಯ ಮಾಡಬಾರದು ಅಂತ ಸೂಚನೆ ಕೊಡ್ತೇನೆ. ಮನವಿ ಕೊಡೋಕ್ಕೆ ಬಂದವರ ಜತೆ ಹಾಗೆ ನಡೆದುಕೊಳ್ಳಬಾರದು. ಅಹವಾಲು ಕೊಡಲು ಜನ ನಮ್ಮ ಬಳಿ ಬರ್ತಾರೆ, ಅದಕ್ಕೆ ಅವಕಾಶ ಕೊಡ್ತೇವೆ. ವಶಕ್ಕೆ ಪಡೆದವರನ್ನ ಬಿಡಲು ಹೇಳ್ತೇನೆ ಎಂದರು.

 


Spread the love

LEAVE A REPLY

Please enter your comment!
Please enter your name here