ಡಿಟೆಕ್ಟಿವ್‌ ಏಜೆನ್ಸಿಗಳಿಗೆ ಅನಧಿಕೃತವಾಗಿ ‌CDR ನೀಡ್ತಾ ಇದ್ದ ಪೊಲೀಸ್ ಸಿಬ್ಬಂದಿ ಅರೆಸ್ಟ್.!

0
Spread the love

ಬೆಂಗಳೂರು: ಖಾಸಗಿ ಡಿಟೆಕ್ಟಿವ್‌ ಏಜೆನ್ಸಿಗಳ ಕಳ್ಳಾಟದಲ್ಲಿ ಸಿಸಿಬಿ ಪೊಲೀಸ್ರು ಸಿಐಡಿ ಪೊಲೀಸ್ ಸಿಬ್ಬಂದಿಯನ್ನ ಸಿಸಿಬಿ ಹಾಗೂ ವಿಜಯನಗರ ಉಪವಿಭಾಗದ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಹಾಗೂ ಪ್ರಕರಣದ ಕಿಂಗ್ ಪಿನ್ ನಾಗೇಶ್ವರ ರೆಡ್ಡಿ ಬಂಧಿತರು. ಮೇ‌ ತಿಂಗಳಲ್ಲಿ ಮಹಾನಗರಿ ಡಿಟೆಕ್ಟಿವ್‌ ಹಾಗೂ ಸೆಕ್ಯೂರಿಟಿ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಎಂಬ ಹೆಸರಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಿ ಅನಧಿಕೃತವಾಗಿ

Advertisement

ಸಿಡಿಆರ್ ಪಡೆಯುತ್ತಿದ್ದ ಆರೋಪದಡಿ ಮೂರು ಪ್ರಕರಣಗಳನ್ನು ದಾಖಲಿಸಿ ಆರೋಪಿಗಳಾದ ಪುರುಷೋತ್ತಮ, ಸತೀಶ್ ಕುಮಾರ್, ತಿಪ್ಪೇಸ್ವಾಮಿ, ಮಹಾಂತಗೌಡ, ರೇವಂತ, ಗುರುಪಾದಸ್ವಾಮಿ, ಶ್ರೀನಿವಾಸ ಮತ್ತು ಭರತ್ ಎಂಬವರನ್ನು ಬಂಧಿಸಲಾಗಿತ್ತು. ಬಂಧಿತ ನಾಗೇಶ್ವರ ರೆಡ್ಡಿಗೆ ಸಿಡಿಆರ್ ನೀಡುತ್ತಿದ್ದ ಆರೋಪದಡಿ ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಎಂಬಾತನನ್ನು ಸೆರೆ ಹಿಡಿಯಲಾಗಿದೆ.

ಗಂಡ ಹೆಂಡತಿ, ಪ್ರೇಮಿಗಳ ನಡುವಿನ ಅನುಮಾನಕ್ಕೆ ಹೆಚ್ಚು ಸಿಡಿಆರ್ ಗಳ ಬಳಕೆ

ಇನ್ನು ಈ ಸಿಡಿಆರ್ ಪಡೆಯುತ್ತಿದ್ದವರು ಯಾರು ಅಂತ ನೋಡೊದಾದ್ರೆ ಹೆಚ್ಚಾಗಿ ಗಂಡ ಅಥವಾ ಹೆಂಡತಿ‌ ಮತ್ತು ಪ್ರೇಮಿಗಳು ಸಂಬಂಧದಲ್ಲಿ ಅನುಮಾನ ಮೂಡಿ ತಮ್ಮ ಪ್ರೀತಿ ಪಾತ್ರರ ಯಾರ ಸಂಪರ್ಕದಲ್ಲಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಈ ಕಾಲ್ ಡಿಟೈಲ್ ನ ಅನಧಿಕೃತವಾಗಿ ಪಡೆದುಕೊಳ್ಳುತ್ತಿದ್ರು ಎನ್ನಲಾಗ್ತಿದೆ.

ಅಷ್ಟೇ ಅಲ್ಲದೆ ಬ್ಯುಸಿನೆಸ್ ಮೆನ್ ಗಳ ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ಎದುರಾಳಿಗಳ ಸಿಡಿಆರ್ ಪಡೆದಿರೋ ಶಂಕೆ ವ್ಯಕ್ತವಾಗಿದೆ. ಇದ್ರಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ಪತ್ನಿಯರು ತಮ್ಮ ಪತಿಯ ಕಾಲ್ ಡಿಟೈಲ್ ಪಡೆದಿದ್ದಾರಂತೆ. ಸದ್ಯ ನಾಗೇಶ್ವರ ರೆಡ್ಡಿ ಮತ್ತು ಪೊಲೀಸ್ ಸಿಬ್ಬಂದಿ ಮುನಿರತ್ನ ಬಂಧಿಸಿರೋ ಸಿಸಿಬಿ ಹಚ್ಚಿನ ವಿಚಾರಣಗೆ ಒಳಪಡಿಸಿದೆ.


Spread the love

LEAVE A REPLY

Please enter your comment!
Please enter your name here