ಸಂಕಣ್ಣವರ್ ಬಿಲ್ಡಿಂಗ್‌ನಲ್ಲಿ ಜೂಜಾಟದ ಅಡ್ಡೆ, 30,400ರೂ, ನಗದು ಹಣ ಜಪ್ತಿ…
ಗದಗ: ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್ ಬಾಹರ್ ಜೂಜಾಟ ನಡೆಯುತ್ತಿದ್ದ ಅಡ್ಡೆಯ ಮೇಲೆ ಬೆಟಗೇರಿ ಬಡಾವಣೆ ಪೊಲೀಸರು ದಾಳಿ ಮಾಡಿ ವ್ಯಾಪಾರಸ್ಥರು, ಮೆಕ್ಯಾನಿಕ್ ಸೇರಿದಂತೆ ಹಲವು ಗಣ್ಯರನ್ನು ವಶಕ್ಕೆ ಪಡೆದು ನೋಟಿಸ್ ನೀಡಿದ ಘಟನೆ ಜರುಗಿದೆ.
ಕಳೆದ ಹಲವು ದಿನಗಳಿಂದ ಹಾಳಕೇರಿ ಮಠದ ಬಳಿಯ ಸಂಕಣ್ಣವರ ಬಿಲ್ಡಿಂಗ್ ನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬೆಟಗೇರಿ ಠಾಣೆಯ ಸಿಪಿಐ ಧೀರಜ್ ಸಿಂಧೆ ನೇತೃತ್ವದಲ್ಲಿ ಬಡಾವಣೆ ಪೊಲೀಸರು, ಬುಧವಾರ ರಾತ್ರಿ ದಾಳಿ ಮಾಡಿ, ಜೂಜಾಟದಲ್ಲಿ ತೊಡಗಿದ್ದ ಇಪ್ಪತ್ತು ಜನರನ್ನು ವಶಕ್ಕೆ ಪಡೆದಿದ್ದಾರೆ.






ದಾಳಿ ವೇಳೆ ಆರೋಪಿಗಳಿಂದ ₹30,400 ನಗದು, 156 ಇಸ್ಪೀಟ್ ಎಲೆಗಳು ಹಾಗೂ 6 ಇಸ್ಪೀಟ್ ಎಲೆಗಳ ಸೆಟ್‌ಗಳನ್ನು ಸ್ಥಳದಲ್ಲಿ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಡಾವಣೆ ಪೊಲೀಸ್ ಠಾಣೆಯಲ್ಲಿ ಗು.ಸಂ. 70/2025, ಕಲಂ 79 ಕೆ.ಪಿ. ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.