ಗದಗ ಜಿಲ್ಲೆಯಾದ್ಯಂತ 102 ರೌಡಿಗಳ ಮನೆ ಜಾಲಾಡಿದ ಪೊಲೀಸ್…ಬೆಳ್ಳಂ ಬೆಳಗ್ಗೆ ದಿಢೀರ್ ದಾಳಿ!

0
Spread the love

ಗದಗ:– ಗದಗ ಜಿಲ್ಲೆಯಾದ್ಯಂತ ಏಕಕಾಲಕ್ಕೆ 102 ರೌಡಿಶೀಟರ್ ಮನೆಗಳ ಮೇಲೆ ಪೊಲೀಸರು ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸುವ ಮೂಲಕ ಬಿಸಿ ಮುಟ್ಟಿಸಿರುವ ಘಟನೆ ಜರುಗಿದೆ.

Advertisement

ಕಾನೂನು – ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ, ಮುಂಜಾಗ್ರತ ಕ್ರಮವಾಗಿ ಗದಗದಲ್ಲಿ ಸಿಪಿಐ ಡಿಬಿ ಪಾಟೀಲ್, ಗದಗ ಗ್ರಾಮೀಣ ಸಿಪಿಐ ಸಿದ್ದರಾಮೇಶ್ವರ ನೇತೃತ್ವದಲ್ಲಿ ರೌಡಿ ಶೀಟರ್ ಗಳ ಮನೆಗಳ ಮೇಲೆ ದಾಳಿ ನಡೆದಿದ್ದು, ಪೊಲೀಸರು ಇಂಚಿಂಚೂ ಜಾಲಾಡಿದ್ದಾರೆ. ಪೊಲೀಸರ ದಾಳಿಯಿಂದ ನಿದ್ದೆ ಗುಂಗಿನಲ್ಲಿದ್ದ ರೌಡಿಶೀಟರ್ ಗಳು ಹಾಗೂ ಅವರ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಗದಗ-ಬೆಟಗೇರಿ ಅವಳಿ ನಗರ, ಗದಗ ಗ್ರಾಮೀಣ, ನರಗುಂದ, ರೋಣ, ಲಕ್ಷ್ಮೇಶ್ವರ ಸೇರಿ ಜಿಲ್ಲೆಯಾದ್ಯಂತ ರೌಡಿಶೀಟರ್ ಗಳ ಮನೆಗಳಲ್ಲಿ ಪೊಲೀಸರು ಶೋಧ ನಡೆಸಿದರು.

ದಾಳಿ ಎಲ್ಲೆಲ್ಲಿ?

ಗದಗ ಶಹರ 10, ಗದಗ ಗ್ರಾಮೀಣ 09, ಬೆಟಗೇರಿ 15, ಬಡಾವಣೆ 03, ನರಗುಂದ 10, ಮುಂಡರಗಿ 12, ಶಿರಹಟ್ಟಿ 05, ಲಕ್ಷ್ಮೇಶ್ವರ 11, ಮುಳಗುಂದ 07, ರೋಣ 11, ನರೇಗಲ್ 03, ಗಜೇಂದ್ರಗಡ 06 ರೌಡಿ ಶೀಟರ್ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು. ದಾಳಿ ವೇಳೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಶಾಂತಿಗೆ ಭಂಗವುಂಟು ಮಾಡುವ ಕೃತ್ಯಗಳಲ್ಲಿ ತೊಡಗದಂತೆ ರೌಡಿ ಶೀಟರ್ ಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಎಸ್ಪಿ ಬಿ ಎಸ್ ನೇಮಗೌಡರ್, ಎಎಸ್ಪಿ ಎಂ ಬಿ. ಸಂಕದ ಮಾಹಿತಿ ಕೊಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here