ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಮಹಿಳೆಯನ್ನು ರಕ್ಷಿಸಿದ ಪೊಲೀಸರು

0
Spread the love

ಚಿಕ್ಕಬಳ್ಳಾಪುರ: ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಮಹಿಳೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸರು ರಕ್ಷಿಸಿ ಮಾನವಿಯತೆ ಮೇರೆದಿದ್ದಾರೆ.

Advertisement

ಹೌದು, ತಾಲೂಕಿನ ಎಲ್ಲೋಡು ಗ್ರಾಮದ ಮಹಿಳೆ ಕಳೆದ ಹಲವು ದಿನಗಳ ಹಿಂದೆ ಅದೇ ಗ್ರಾಮದ ವ್ಯಕ್ತಿಯನ್ನು ಪ್ರೀತಿಸಿ ಮದುವೆ ಆಗಿ, ಬಾಗೇಪಲ್ಲಿ ಪಟ್ಟಣದಲ್ಲಿ ವಾಸವಿದ್ದು, ಇತ್ತೀಚಗೆ ತನ್ನ ಗಂಡನಿಗೆ ಅಪಘಾತವಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,

ಪೋಷಕರ ವಿರೋಧದ ನಡುವೆಯೂ ವಿವಾಹವಾದ ದಂಪತಿ ಕಷ್ಟಗಳನ್ನೆ ಎದುರಿಸಿಕೊಂಡು ಬರುತ್ತಿದ್ದೆನೆ, ಜತೆಗೆ ತನ್ನ ಅಕ್ಕ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾಳೆ ಎಂದು ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು ಅ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಅ ವಿಡಿಯೋ ನೋಡಿದ ಗುಡಿಬಂಡೆ ‌ಪೊಲೀಸರಾದ ದಕ್ಷಿಣ ಮೂರ್ತಿ ಮತ್ತು ಮುರಳಿ ಅವರು ಮಹಿಳೆ ಬಳಸುತ್ತಿದ್ದ ಮೊಬೈಲ್ ಲೊಕೇಷನ್ ಬಳಸಿಕೊಂಡು ಮಹಿಳೆಯನ್ನು ಗುಡಿಬಂಡೆ ಕೆರೆಯ ಬಳಿ‌ ಪತ್ತೆ ಹಚ್ಚಿದ್ದಾರೆ,

ಇನ್ನು ಮಹಿಳೆ ಸ್ಲೀಪಿಂಗ್ ಮಾತ್ರೆ‌ ಸೇವಿಸಿದ್ದು, ಗುಡಿಬಂಡೆ ಪೊಲೀಸರು ಕೂಡಲೇ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಮಹಿಳೆ ಪ್ರಾಣ ರಕ್ಷಸಿದ್ದಾರೆ.

ಒಟ್ಟಾರೆ ಮಹಿಳೆಯ ವಿಡಿಯೋ ನೋಡಿ ಕೆಲವೇ ಗಂಟೆಗಳಲ್ಲಿ ಮಹಿಳೆಯನ್ನು ಪತ್ತೆ ಹಚ್ಚಿ ಮಹಿಳೆಯ ಪ್ರಾಣ ಉಳಿಸಿದ ಪೊಲೀಸರಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.


Spread the love

LEAVE A REPLY

Please enter your comment!
Please enter your name here