ಧಾರವಾಡ: ಕಂದಾಯ ಇಲಾಖೆ ಅಧಿಕಾರಿಯೊಬ್ಬರ ಮೇಲೆ ಪೊಲೀಸಪ್ಪನೊಬ್ಬ ಹಲ್ಲೆ ಮಾಡಿರುವ ಘಟನೆ ಅಣ್ಣಿಗೇರಿಯಲ್ಲಿ ನಡೆದಿದೆ ಎನ್ನಲಾಗಿದೆ.
Advertisement
ಕಂದಾಯ ಇಲಾಖೆ ಅಧಿಕಾರಿ ರಿಷಿ ಸಾರಂಗ ಎಂಬುವವರು ಪೊಲೀಸಪ್ಪನ ಬೈಕ್ ಮೇಲೆ ನೀರಿನ ಬಾಟಲ್ ಇಟ್ಟಿದ್ದರು. ಇದಕ್ಕೆ ಕೋಪಗೊಂಡ ಪೊಲೀಸ್ ನನ್ನ ಬೈಕ್ ಮೇಲೆ ಬಾಟಲ್ ಇಟ್ಟಿದ್ದು ಯಾಕೆ ಎಂದು ರಿಷಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿಲಾಗಿದೆ.
ಅಣ್ಣಿಗೇರಿ ಪೊಲೀಸ್ ಠಾಣೆಯ ಪೇದೆ ಮಂಜು ನಾಗಾವಿ ಎಂಬುವವರೇ ರಿಷಿ ಅವರ ಮೇಲೆ ಹಲ್ಲೆ ನಡೆಸಿದವರು ಎನ್ನಲಾಗಿದೆ. ಈ ಸಂಬಂಧ ರಿಷಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತದೆ.