ಪೊಲಿಟಿಕಲ್ ಜಡ್ಜ್ ಮೆಂಟ್ ಅಂತ ಹೇಳಿದ್ದು ತಪ್ಪು, ಕ್ಷಮಿಸಿ: ಜಮೀರ್!

0
Spread the love

ಬೆಂಗಳೂರು:- ಪೊಲಿಟಿಕಲ್ ಜಡ್ಜ್ ಮೆಂಟ್ ಅಂತ ಹೇಳಿದ್ದು ತಪ್ಪು, ಕ್ಷಮಿಸಿ ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

Advertisement

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪು ಪೊಲಿಟಿಕಲ್‌ ಜಡ್ಜ್‌ಮೆಂಟ್ ಎಂಬ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

ನಿನ್ನೆ ಹೇಳಿಕೆ ನೀಡುವಾಗ ಒಂದು ಪದ ಬಳಸಿದೆ. ರಾಜಕೀಯ ಮಾಡುತ್ತಾರೆ ಅಂತ ಹೇಳುವ ಬದಲು ಪೊಲಿಟಿಕಲ್ ಜಡ್ಜ್ ಮೆಂಟ್ ಅಂತ ಹೇಳಿದ್ದೆ. ನಾನು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಅಂತ ಹೇಳೋಕೆ ಹೋಗಿದ್ದೆ. ನ್ಯಾಯಾಲಯದ ಬಗ್ಗೆ ನನಗೆ ಗೌರವ ಇದೆ. ತಪ್ಪಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.‌

ಇನ್ನೂ ಇಂದು ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಜಮೀರ್‌ ಹೇಳಿಕೆಯ ಬಗ್ಗೆ ಜೋರು ಚರ್ಚೆ ನಡೆದಿದೆ. ಹಿರಿಯ ನಾಯಕರು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಜಮೀರ್‌ ಕ್ಷಮೆ ಕೇಳುವ ಮೂಲಕ ವಿಚಾರವನ್ನು ತಣ್ಣಗೆ ಮಾಡಲು ಮುಂದಾಗಿದ್ದಾರೆ.


Spread the love

LEAVE A REPLY

Please enter your comment!
Please enter your name here