ಕೆಂಪಾಗಿ ಕಂಗೊಳಿಸುವ ಈ ದಾಳಿಂಬೆ ಹಣ್ಣು ಕೇವಲ ರುಚಿಯಲ್ಲ, ಆರೋಗ್ಯಕ್ಕೂ ಅಪಾರ ಲಾಭಕರ. ಅದರ ಕಾಳುಗಳು ಎಷ್ಟು ರುಚಿ ನೀಡುತ್ತವೆಯೋ, ಅದರ ಜ್ಯೂಸ್ ಕೂಡ ಅದ್ಭುತ ಆರೋಗ್ಯ ಗುಣಗಳಿಂದ ತುಂಬಿದೆ.
ನಿತ್ಯವೂ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಅನೇಕ ರೋಗಗಳು ದೂರವಾಗುತ್ತವೆ. ಹೇಗೆ ಅಂತಾ ನೋಡೋಣ.
1. ಉತ್ಕರ್ಷಣ ನಿರೋಧಕಗಳು – ಕ್ಯಾನ್ಸರ್‌ಗೂ ಕವಚ
ದಾಳಿಂಬೆ ಜ್ಯೂಸ್‌ನಲ್ಲಿ ಉರಿಯೂತ ವಿರೋಧಿ ಮತ್ತು ಉತ್ಕರ್ಷಣ ನಿರೋಧಕಗಳು ಬಹಳಷ್ಟು ಇರುತ್ತವೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಂದ ರಕ್ಷಣೆ ನೀಡುತ್ತದೆ.
2. ಹೃದಯದ ಆರೋಗ್ಯಕ್ಕೆ ಸಹಾಯಕ:–
ಮಿತವಾಗಿ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ. ಪಾಲಿಫಿನಾಲ್ಸ್ ಎನ್ನುವ ಸಂಯುಕ್ತಗಳು ರಕ್ತದ ಹಾರಾಟವನ್ನು ಸುಧಾರಿಸುತ್ತವೆ ಮತ್ತು ಹೃದಯವನ್ನು ಬಲಪಡಿಸುತ್ತವೆ.
3. ಕಿಡ್ನಿಗೆ ಕವಚ:-
ದಾಳಿಂಬೆ ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ. ಇದು ಮೂತ್ರಪಿಂಡದ ಕಲ್ಲುಗಳ ರಚನೆ ತಡೆಯಲು ಮತ್ತು ಕಿಡ್ನಿ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
4. ರಕ್ತದೊತ್ತಡ ನಿಯಂತ್ರಣ:-
ದೈನಂದಿನ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ. ಇದು ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಸುಧಾರಿಸಿ ರಕ್ತಪರಿವಾಹ ಸರಾಗವಾಗಲು ಸಹಾಯ ಮಾಡುತ್ತದೆ.
5. ತೂಕ ಇಳಿಕೆಗೆ ಸಹಾಯಕ:-
ದಾಳಿಂಬೆ ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಕಡಿಮೆ ಕ್ಯಾಲೋರಿ ಹಣ್ಣು. ಇದು ಮೆಟಾಬಾಲಿಸಮ್ ಹೆಚ್ಚಿಸಿ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಬಯಸುವವರಿಗೆ ಅತ್ಯುತ್ತಮ ಆಯ್ಕೆ.
6. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:-
ವಿಟಮಿನ್ C ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾದ ದಾಳಿಂಬೆ ಜ್ಯೂಸ್, ದೇಹದ ಪ್ರತಿರೋಧಕ ಶಕ್ತಿಯನ್ನು ಬಲಪಡಿಸಿ ಸೀಸನಲ್ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ.
7. ಫಲವತ್ತತೆ ಹೆಚ್ಚಿಸುತ್ತದೆ:-
ದಾಳಿಂಬೆ ಹಣ್ಣಿನಲ್ಲಿ ಇರುವ ಪೋಷಕಾಂಶಗಳು ಲೈಂಗಿಕ ಆರೋಗ್ಯ ಸುಧಾರಣೆಗೂ, ಫೋಲಿಕ್ ಆಮ್ಲ ಉತ್ಪಾದನೆಗೂ ಸಹಾಯಕವಾಗಿದ್ದು ಗರ್ಭಧಾರಣೆಗೆ ಸಹಾಯ ಮಾಡುತ್ತವೆ.
ದಾಳಿಂಬೆ ಜ್ಯೂಸ್ ಕುಡಿಯಲು ಉತ್ತಮ ಸಮಯ:-
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ಜ್ಯೂಸ್ ಕುಡಿಯುವುದು ಅತ್ಯುತ್ತಮ. ಈ ವೇಳೆಯಲ್ಲಿ ದೇಹವು ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ.


