Homecultureಗಣೇಶನನ್ನು ಪೂಜಿಸುವುದು ಶ್ರೇಷ್ಠ ಕಾರ್ಯ : ಭುಜಂಗಶರ್ಮಾ ಜೋಷಿ

ಗಣೇಶನನ್ನು ಪೂಜಿಸುವುದು ಶ್ರೇಷ್ಠ ಕಾರ್ಯ : ಭುಜಂಗಶರ್ಮಾ ಜೋಷಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ತಂದೆ-ತಾಯಿ ಸ್ವತಃ ಭಗವತ್ ಸ್ವರೂಪರು. ಅವರನ್ನು ಯಾರು ಅನನ್ಯ ಭಾವದಿಂದ ಪೂಜಿಸುತ್ತಾರೆಯೋ ಅವರು ಸದ್ಗತಿಯನ್ನು ಪಡೆಯುತ್ತಾರೆ. ತಂದೆ-ತಾಯಿ ಪೂಜಿಸುವುದನ್ನು ನಾವು ಗಣಪತಿಯಿಂದ ಕಲಿಯಬೇಕಿದೆ. ತಂದೆ-ತಾಯಿಯರನ್ನು ಪೂಜಿಸುವುದರಿಂದ 33 ಕೋಟಿ ದೇವತೆಗಳ ಪೂಜೆ ಮಾಡಿದ ಪುಣ್ಯ ದೊರಕುತ್ತದೆ ಎಂದು ಸೂಡಿ ಶ್ರೀ ಚಿದಂಬರೇಶ್ವರ ದೇವಸ್ಥಾನದ ವೇ. ಬ್ರ.ಶ್ರೀ ಭುಜಂಗಶರ್ಮಾ ಜೋಷಿ ಹೇಳಿದರು.

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಗಣಹೋಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಅಥರ್ವಶೀರ್ಷ ಮಂತ್ರವು ಶ್ರೀ ಗಣೇಶನ ಮಹತ್ವವನ್ನು ತಿಳಿಸುತ್ತದೆ. ಮೂರು ಲೋಕಕ್ಕೂ ಒಡೆನಾಗಿರುವವನು ಶ್ರೀ ಗಣೇಶ. ಅದಕ್ಕಾಗಿಯೇ ಎಲ್ಲ ಕಾರ್ಯಗಳಲ್ಲಿಯೂ ಮೊದಲಿಗೆ ಅವನಿಗೆ ಅಗ್ರ ಪೂಜೆ ಸಲ್ಲುತ್ತದೆ.

ದೈವತ್ವವನ್ನು ಪಾಲಿಸುವವನು, ಪಿತೃ ವಾಕ್ಯ ಪರಿಪಾಲನೆ ಮಾಡುವವನು, ಮನೋನಿಗ್ರಹ ಮಾಡುವನನ್ನು ಬ್ರಹ್ಮಚಾರಿ ಎಂದು ಕರೆಯಲಾಗುತ್ತದೆ. ಮೋದಕ, ಕರಕಿಗಳಿಂದ ಶ್ರೀ ಗಣೇಶನನ್ನು ಪೂಜಿಸುವುದು ಅತ್ಯಂತ ಶ್ರೇಷ್ಠವಾದ ಕಾರ್ಯವಾಗಿದೆ ಎಂದು ಹೇಳಿದರು.

ಹನುಮಾನ ಚಾಲೀಸಾ ಪಠಣದಲ್ಲಿ ಅದ್ಭುತ ಶಕ್ತಿಯಿದೆ. ಈ ಚಾಲೀಸಾವನ್ನು ಪಠಣ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ. ಜನ್ಮ ಸಾರ್ಥಕತೆಗೆ ಹನುಮಾನ ಚಾಲೀಸಾ ಸಹಕಾರಿಯಾಗಿದೆ. ತುಲಸೀದಾಸರು ರಚಿಸಿದ ಈ ಚಾಲೀಸಾ ಪಠಣೆಯಿಂದ ಜನ್ಮ ಜನಾಂತರದ ಪಾಪಗಳು ನಾಶವಾಗಿ ಸದ್ಗತಿಗೆ ದಾರಿಯಾಗುತ್ತದೆ. ಹನುಮಂತನು ಶ್ರೀರಾಮನ ಅನುಗ್ರಹದಿಂದ ದೈವತ್ವವನ್ನು ಪಡೆದನು. ಆದ್ದರಿಂದ ದಿನಕ್ಕೆ ಒಮ್ಮೆಯಾದರೂ ಹನುಮಾನ ಚಾಲೀಸಾ ಪಠಿಸುವುದನ್ನು ರೂಢಿಸಿಕೊಳ್ಳಬೇಕೆಂದು ಜೋಷಿ ತಿಳಿಸಿದರು.

ವೇದಿಕೆಯ ಮೇಲೆ ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಉಪಸ್ಥಿತರಿದ್ದರು.

ವೇ.ಮೂ. ಶ್ರೀವಲ್ಲಭಭಟ್ಟ ಸದರಜೋಷಿಯವರ ನೇತೃತ್ವದಲ್ಲಿ ಶ್ರೀವಲ್ಲಭ ಕುರಂದ್ವಾಡ ದಂಪತಿಗಳ ಯಜಮಾನತ್ವದಲ್ಲಿ, ಭುಜಂಗಶರ್ಮಾ ಜೋಷಿಯವರ ಸಮ್ಮುಖದಲ್ಲಿ ಹೋಮಕ್ಕೆ ಪೂರ್ಣಾಹುತಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಎಚ್. ಜೋಷಿ, ಆರ್.ವಿ. ಕುಲಕರ್ಣಿ, ಆನಂದ ಕುಲಕರ್ಣಿ, ಶೇಷಗಿರಿ ಕುಲಕರ್ಣಿ, ರಂಗಣ್ಣ ಕುಲಕರ್ಣಿ, ಪ್ರಕಾಶ ಕುಲಕರ್ಣಿ, ಎಸ್‌ಬಿಐನ ನಿವೃತ್ತ ವ್ಯವಸ್ಥಾಪಕ ಅವಧೂತ ಕುರಂದ್ವಾಡ, ಎ.ಜಿ. ಕುಲಕರ್ಣಿ, ಡಾ. ಕೃಷ್ಣ ಕಾಳೆ, ಶೇಷಗಿರಿರಾವ ಕುಲಕರ್ಣಿ, ಎ.ಜಿ. ಕುಲಕರ್ಣಿ, ಅರುಣ ಕುಲಕರ್ಣಿ, ಪ್ರಕಾಶ ಕುಲ ಕುಲಕರ್ಣಿ, ಆರ್.ಡಿ ಕುಲಕರ್ಣಿ, ವಿನಾಯಕ ಗ್ರಾಮಪುರೋಹಿತ, ಎಸ್.ಎಚ್ ಕುಲಕರ್ಣಿ, ಅಪ್ಪಣ್ಣ ಗ್ರಾಮಪುರೋಹಿತ, ಅರುಣ ಗ್ರಾಮಪುರೋಹಿತ, ರಘುನಾಥ ಕೊಂಡಿ, ಮಂಜುನಾಥ ಗ್ರಾಮಪುರೋಹಿತ, ಹರೀಶ ಕುಲಕರ್ಣಿ, ರಾಮಕೃಷ್ಣ ಸದರಜೋಷಿ ಸೇರಿದಂತೆ ಅನಸೂಯಾ ಮಹಿಳಾ ಮಂಡಳದ ಸದಸ್ಯರು ಇದ್ದರು.

ಅಧ್ಯಕ್ಷತೆ ವಹಿಸಿದ್ದ ಡಾ. ಜಿ.ಕೆ. ಕಾಳೆ ಮಾತನಾಡಿ, ಬರುವ ಡಿಸೆಂಬರ್‌ನಲ್ಲಿ ಇಲ್ಲಿ ಅಖಂಡ ಹನುಮಾನ ಚಾಲೀಸಾ ಪಠಣೆಯನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಮುನ್ನುಡಿಯಾಗಿ ಇಂದು ಗಣಹೋಮವನ್ನು ಹಮ್ಮಿಕೊಂಡಿದ್ದೇವೆ. ಶ್ರೀ ದತ್ತ ಭಕ್ತ ಮಂಡಳಿಯ ಆಶ್ರಯದಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಸರ್ವರೂ ಸಕಲ ರೀತಿಯ ಸಹಕಾರ ನೀಡಿ ಯಶಸ್ವಿ ಮಾಡಬೇಕೆಂದು ಹೇಳಿದರು.

 


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!