HomeGadag Newsನರೇಗಲ್ಲ ಶಿಕ್ಷಣಕ್ಕೆ ಹೆಸರುವಾಸಿ : ಉಮೇಶ ಸಂಗನಾಳಮಠ

ನರೇಗಲ್ಲ ಶಿಕ್ಷಣಕ್ಕೆ ಹೆಸರುವಾಸಿ : ಉಮೇಶ ಸಂಗನಾಳಮಠ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಕನ್ನಡ ಎಂ.ಎ.ಯಲ್ಲಿ ಬಂಗಾರದ ಪದಕವನ್ನು ಪಡೆಯುವ ಮೂಲಕ ಪೂಜಾ ಗ್ರಾಮಪುರೋಹಿತ ನರೇಗಲ್ಲ ಪಟ್ಟಣದ ಕೀರ್ತಿಯನ್ನು ಬಾನೆತ್ತರಕ್ಕೆ ಏರಿಸಿದ್ದಾಳೆ. ಅವಳು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ರೋಣ ಮಂಡಲ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ ಹೇಳಿದರು.

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ರೋಣ ಬಿಜೆಪಿ ಮಂಡಳದ ವತಿಯಿಂದ ಪೂಜಾಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ವಿದ್ಯಾಭ್ಯಾಸದ ಸಮಯದಲ್ಲಿ ವಿಶೇಷ ಗಮನವನ್ನಿಟ್ಟು ಅಧ್ಯಯನ ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಎಂಬುದನ್ನು ಪೂಜಾ ಸಾಧಿಸಿ ತೋರಿಸಿದ್ದಾರೆ. ಈ ಮೂಲಕ ಅವರು ಇತರೆ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಈಗ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪೂಜಾರನ್ನು ಮಾದರಿಯಾಗಿಟ್ಟುಕೊಂಡು ತಮ್ಮ ಅಧ್ಯಯನದ ವೇಳಾ ಪತ್ರಿಕೆಯನ್ನು ತಯಾರಿಸಿಕೊಳ್ಳಬೇಕೆಂದರು.

ಶಹರ ಬಿಜೆಪಿ ಘಟಕದ ಅಧ್ಯಕ್ಷ, ನ್ಯಾಯವಾದಿ ಉಮೇಶ ಸಂಗನಾಳಮಠ ಮಾತನಾಡಿ, ನರೇಗಲ್ಲ ಎಂದಿಗೂ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳವರು ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಬಾಳಿಗೆ ಬೆಳಕನ್ನು ನೀಡುತ್ತಿವೆ. ಇಂತಹ ಸಂಸ್ಥೆಯ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಓದಿದ ಪೂಜಾ ಇಡೀ ಪಟ್ಟಣವೇ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದಾರೆ.

ಅವರಿಗೆ ನಮ್ಮ ಬಿಜೆಪಿ ಘಟಕದ ಪರವಾಗಿ ಹಾರ್ದಿಕ ಅಭಿನಂದನೆಗಳು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಉಮೇಶ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಶಿವಕುಮಾರ ದಡ್ಡೂರ, ಚಂದ್ರು ಕುರಿ, ಶಶಿಧರ ಸಂಕನಗೌಡ್ರ, ಮಹೇಶ ಶಿವಶಿಂಪ್ರ, ಚರಣ ಕಟ್ಟಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!