ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮದ ಆರಾಧ್ಯ ದೇವತೆ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿಯ 603ನೇ ಜಯಂತ್ಯುತ್ಸವದ ಅಂಗವಾಗಿ ಹೇಮರಡ್ಡಿ ಮಲ್ಲಮ್ಮ ತಾಯಿಯವರ ಭಾವಚಿತ್ರ ಮೆರವಣಿಗೆ ಶನಿವಾರ ವಿಜೃಂಭಣೆಯಿಂದ ನಡೆಯಿತು.
Advertisement
ಗ್ರಾಮದ ಕಪ್ಪತ್ತಮಲೇಶ್ವರ ಟ್ರಸ್ಟ್ ಕಮಿಟಿ, ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿಯ ಸಹಯೋಗದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಾಸ್ಥಾನದಿಂದ ಆರಂಭವಾದ ಭಾವಚಿತ್ರ ಮೆರವಣಿಗೆ ಮುಖ್ಯ ಬಜಾರ, ಮಾಯಮ್ಮ ದೇವಿ, ಬಡಾವಣೆ ಬಸ್ ನಿಲ್ದಾಣ, ತೋಂಟದಾರ್ಯ ಮಠದ ಮುಂಭಾಗದಿಂದ ಬಸವಣ್ಣ ವೃತ್ತದ ಮಾರ್ಗವಾಗಿ ಸ್ವಸ್ಥಾನಕ್ಕೆ ಆಗಮಿಸಿತು. ಗ್ರಾಮದ ನೂರಾರು ಮಹಿಳೆಯರು ಮತ್ತು ಯುವತಿಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಜಯಂತಿ ನಿಮಿತ್ತ ಪ್ರಸಾದ ವಿತರಣೆ ಮಾಡಲಾಯಿತು. ಗ್ರಾಮದ ಕಪ್ಪತ್ತಮಲೇಶ್ವರ ಟ್ರಸ್ಟ್ ಕಮಿಟಿ, ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ಸರ್ವ ಸದಸ್ಯರ ಸಹಯೋಗದಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು.