ವಿಜಯಸಾಕ್ಷಿ ಸುದ್ದಿ, ಡಂಬಳ : ಮಕ್ಕಳು ಈ ದೇಶದ ಸಂಪತ್ತು. ಮಕ್ಕಳ, ಗರ್ಭಿಣಿಯರ ಹಿತಕ್ಕಾಗಿ ಸರ್ಕಾರದ ಯೋಜನೆಗಳನ್ನು ತಲಿಪಿಸುವುದರ ಮೂಲಕ ಇಲಾಖೆಯು ಸದಾ ಶ್ರಮಿಸುತ್ತಿದೆ. ಇದರ ಸಂಪೂರ್ಣ ಸದುಪಯೋಗವನ್ನು ಪಡೆಯಲು ಮುಂದಾಗಬೇಕು ಎಂದು ಮುಂಡರಗಿ ತಾಲೂಕು ಸಿಡಿಪಿಒ ಎಮ್.ಎಮ್. ಇಸರನಾಳ ಹೇಳಿದರು.
ಡಂಬಳ ಗ್ರಾಮದ 13ನೇ ಅಂಗನವಾಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗದಗ ಮತ್ತು ಶಿಶು ಅಭಿವೃದ್ಧಿ ಯೋಜನೆ ಮುಂಡರಗಿ, ಡಂಬಳ ಗ್ರಾಮದ ಅಂಗನವಾಡಿ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಮತ್ತು ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗರ್ಭಿಣಿ ಮಹಿಳೆಯರು ಪೌಷ್ಟಿಕ ಆಹಾರಕ್ಕೆ ಆದ್ಯತೆ ನೀಡಬೇಕು. ಮಕ್ಕಳ ದೈಹಿಕ ಕ್ಷಮತೆಗೆ ಹಾಗೂ ಕ್ರಿಯಾಶೀಲತೆಗೆ ಪೌಷ್ಟಿಕ ಆಹಾರಗಳು ಅಗತ್ಯವಿದ್ದು, ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ಪೌಷ್ಟಿಕ ಆಹಾರಗಳನ್ನು ನೀಡುವುದರೊಂದಿಗೆ ಅದರ ಮಹತ್ವವನ್ನು ಅರಿತುಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.
13ನೇ ಅಂಗನವಾಡಿ ಕಾರ್ಯಕರ್ತೆ ಎನ್.ಎಫ್. ಆನಿ ಮಾತನಾಡಿ, ರೋಗ ಬಂದ ಮೇಲೆ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ ರೋಗ ಬರದೆ ಇರುವ ಹಾಗೆ ನೋಡಕೊಳ್ಳುವುದು ಬಹಳ ಮುಖ್ಯ. ಗರ್ಭಿಣಿ ಮಹಿಳೆಯರು ನಿಯಮಿತವಾಗಿ ಪೂರಕ ಆಹಾರ ಸೇವನೆ ಮಾಡಬೇಕು. ಆದಷ್ಟು ಪೌಷ್ಟಿಕ ಆಹಾರ ಸೇವನೆ ಮಾಡುವುದು ತಾಯಿ ಮತ್ತು ಮಗುವಿಗೆ ಒಳ್ಳೆಯದು ಎಂದು ತಿಳಿಸಿದರು.
ಪೋಷಣ ಅಭಿಯಾನದ ತಾಲೂಕು ಸಂಯೋಜಕ ಎಚ್.ಬಿ. ಟಗರನ್ನವರ ಮಾತನಾಡಿದರು. ಮಕ್ಕಳ ಹುಟ್ಟು ಹಬ್ಬ ಆಚರಣೆ, ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ವಿವಿಧ ಜಾನಪದ ಹಾಡುಗಳನ್ನು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಹಾಡುವುದರ ಮೂಲಕ ಗರ್ಭಿಣಿ ಮಹಿಳೆಯರ ಮನೋಸ್ಥೈರ್ಯ ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಮಮತಾಜ ಚಿಂತಗುಂಟಿ, ಎಸ್.ಎಸ್. ಬಾರಕೇರ, ರೇಷ್ಮಾ ಆಲೂರ, ಅಂಗನವಾಡಿ ಕಾರ್ಯಕರ್ತೆಯರಾದ ಎಲ್.ಎಮ್. ಚಿಕರಡ್ಡಿ, ಸೈನಾಜ ಕರನಾಚಿ, ಸೈನಾಜ ಮೂಲಿಮನಿ, ಎಸ್.ಎಚ್. ವಾಲ್ಮಿಕಿ, ಬಿ.ಎಚ್. ಕುದರಿಮೋತಿ, ಅಂಗನವಾಡಿ ಸಹಾಯಕಿಯರು, ಕಸ್ತೂರಿ ಪೂಜಾರ, ಚೇತನಾ ಡೋಣಿ, ನಾಗರತ್ನ ಹೊಂಬಳ, ಹನಮವ್ವ ಬೋರಗಿ, ರೇಷ್ಮಾ ನದಾಫ್, ರೂಪಾ ಗುಜ್ಜಲ್, ಅಕ್ಕಮ್ಮ ದಾಸರ, ಸಾರದಾ ಬಂಡಿ, ಆರ್.ವಾಯ್. ಕರಿಗಾರ, ಎಸ್.ವಾಯ್. ಹೊಂಬಳ, ಪಿ.ಕೆ. ಕಾಸ್ತಾರ, ಆರ್.ಎಮ್. ಸೊರಟೂರ, ಜಿ.ಆರ್. ಗೌಡರ, ಆರ್.ಜೆ. ತಾಂಬೋಟಿ, ಎಸ್.ಎನ್. ಬಳಗಾನೂರ, ಗರ್ಭಿಣಿ ಮಹಿಳೆಯರು, ಮಕ್ಕಳು, ಪೋಷಕರು ಇದ್ದರು.
ಅಂಗನವಾಡಿ ಮೇಲ್ವಿಚಾರಕಿ ಎಸ್.ಎಸ್. ಹಾದಿಮನಿ ಮಾತನಾಡಿ, ದೇಹಕ್ಕೆ ಬೇಕಾಗುವ ಪೋಷಕಾಂಶಗಳ ಕುರಿತು ವಿವರಿಸುತ್ತ, ಅವುಗಳನ್ನು ಎಷ್ಟು ಪ್ರಮಾಣದಲ್ಲಿ ಬಳಸಿದರೆ ದೇಹಕ್ಕೆ ಶಕ್ತಿ ನೀಡಬಲ್ಲವು ಎಂಬುದನ್ನು ಧಾನ್ಯಗಳ ಚಿತ್ರ ಸಮೇತ ತೋರಿಸಿದ್ದು ಉತ್ತಮ ರಚನಾತ್ಮಕ ಕಾರ್ಯವಾಗಿದೆ. ಖನಿಜಾಂಶ ಹೊಂದಿರುವ ಸೊಪ್ಪು, ತರಕಾರಿ ಜೊತೆಗೆ ಮೊಳಕೆ ಒಡೆದ ಕಾಳುಗಳನ್ನು ಉಪಯೋಗಿಸಬೇಕು. ತಾಯಿ ಆರೊಗ್ಯವಾಗಿದ್ದರೆ ಮಾತ್ರ ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯ ಎಂದು ಹೇಳಿದರು.