ಪೋಷಣ್ ಮಾಸಾಚರಣೆ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ: ನರಗುಂದ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ನರಗುಂದ ತಾಲೂಕಿನ ಸುರಕೋಡ್ ಗ್ರಾಮದ ಸಮುದಾಯ ಭವನದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪೋಷಣ್ ಮಾಸಾಚರಣೆ ಶೀರ್ಷಿಕೆಯಡಿ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ತಯಾರಿಕೆ ಸ್ಪರ್ಧೆ, ಉತ್ತಮ ಮಗು ಆಯ್ಕೆ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದು ಸಂತಸದ ವಿಚಾರ ಎಂದರು.

ಪೋಷಣ್ ಸಂಯೋಜಕ ಮಂಜುನಾಥ ಗುಗ್ಗರಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಸದೃಢ ಆರೋಗ್ಯಕ್ಕೆ ಸಮತೋಲಿತ ಆಹಾರ ಅತಿ ಅವಶ್ಯಕ ಎಂದರು.

ಕಾರ್ಯಕ್ರಮದಲ್ಲಿ ಮಿಷನ್ ಶಕ್ತಿ ಹಾಗೂ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕರಾದ ರಾಜೇಶ್ವರಿ ಉಪ್ಪಿನ್, ನೇತ್ರಾವತಿ ಹರ್ತಿಯವರು ಜಿಲ್ಲಾ ಮಹಿಳಾ ಸಬಲೀಕರಣ ಘಟಕ ವತಿಯಿಂದ ಅರಿವು ಕಾರ್ಯಕ್ರಮಗಳ ಕುರಿತು ಹಾಗೂ ಇಲಾಖೆಯಿಂದ ಮಹಿಳೆ/ಮಕ್ಕಳಿಗೆ ದೊರಕುವ ವಿವಿಧ ಸೌಲಭ್ಯಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಮಂಜುಳಾ ತಳವಾರ, ಸದಸ್ಯರಾದ ಶಿವನಗೌಡ ರಾಯನಗೌಡ್ರ, ಆರೋಗ್ಯ ಇಲಾಖೆಯ ಐ.ಆರ್. ಗಂಜಿ, ಎಮ್.ಟಿ. ಕಲ್ಯಾಣಿ, ಕುಂಬಾರ, ಐ.ಎ. ಗುಳ್ಳನ್ನವರ, ಮಂಜುಳಾ ಕುರುಬನಾಳ, ಹೇಮಾ ಪತ್ತಾರ, ಸುನಿತಾ ಹೊನ್ನಣ್ಣವರ, ಮಮತಾಜ್ ಹೊಂಗಲ್, ದಾನಮ್ಮ ಮಠಪತಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಇದ್ದರು. ಬೇಬಿ ದೊಡ್ಡಮನಿ ಸ್ವಾಗತಿಸಿದರು, ಶಿವಲೀಲಾ ಹಿರೇಮಠ ನಿರೂಪಿಸಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here