ಬೆಂಗಳೂರು:- ಅಸಭ್ಯ ರೀತಿ ಕಾಣುವಂತೆ ಸಾರ್ವಜನಿಕ ಸ್ಥಳದಲ್ಲಿ ಯುವತಿಯರ ಫೋಟೋ, ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ ವ್ಯಕ್ತಿಯನ್ನು ಅಶೋಕನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Advertisement
19 ವರ್ಷದ ಹುಸೇನ್ ಬಂಧಿತ ಆರೋಪಿ. ದಿಲ್ಬರ್ ಜಾನಿ ಎಂಬ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಆರೋಪಿಯು, ಬೆಂಗಳೂರು ನೈಟ್ ಲೈಫ್ ಅಂತಾ ಅಸಭ್ಯ ರೀತಿಯಲ್ಲಿ ಯುವತಿಯರ ಫೋಟೋ ಹಾಗೂ ವಿಡಿಯೋ ತೆಗೆದು ಅಪ್ ಲೋಡ್ ಮಾಡ್ತಿದ್ದ.
ಅದೇ ರೀತಿ ಎಮ್ ಜಿ ರೋಡ್, ಬ್ರಿಗೆಡ್ ರೋಡ್ ನಂತಹ ಜಾಗಗಳಲ್ಲಿ ರಾತ್ರಿ ಫೋಟೋ, ವಿಡಿಯೋ ತೆಗೆದು ಅಪ್ ಲೋಡ್ ಮಾಡುತ್ತಿದ್ದ. ಈ ಸಂಬಂಧ ಸೊಮೊಟೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.