ಬೆಂಗಳೂರು:- ಬೆಸ್ಕಾಂ ಸಿಬ್ಬಂದಿಗಳ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ ಡಿಸೆಂಬರ್ 19ರವರೆಗೂ ಪವರ್ ಕಟ್ ಇರಲಿದೆ.
ಪವರ್ ಕಟ್ ಆಗುವ ಸ್ಥಳಗಳು:-
ಬೆಂಗಳೂರು ರಸ್ತೆ, ಕಣಂಪಳ್ಳಿ, ಪ್ರಭಾಕರ್ ಲೇಔಟ್, ಗುಂಡಪ್ಪ ಲೇಔಟ್, ಅಂಜನಿ ಲೇಔಟ್, ಆಶ್ರಯ ಲೇಔಟ್, ಕೆಂಪಮ್ಮ ಲೇಔಟ್, ವೆಂಕಟಗಿರಿಕೋಟೆ, ಫಿಲ್ಟರ್ ಬೆಡ್ ಸರ್ಕಲ್, ರಾಯಲ್ ಸರ್ಕಲ್, ಬಾಗೇಪಲ್ಲಿ ಸರ್ಕಲ್, ಟ್ಯಾಂಕ್ ಬಂಡ್ ರಸ್ತೆ, ಟೀಚರ್ಸ್ ಕಾಲೋನಿ ಮತ್ತು ತಿಮ್ಮಸಂದ್ರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಅದರಂತೆ ಮಾದೇಶ್ವರನಗರ, ಪ್ರಸನ್ನ ಲೇಔಟ್, ಹೊಸಹಳ್ಳಿ, ಕೆಂಪೇಗೌಡ ನಗರ, ಗೊಲ್ಲರಹಟ್ಟಿ, ನಾಡಕೇರಪ್ಪ ಕೈಗಾರಿಕಾ ಪ್ರದೇಶ, ಹೇರೋಹಳ್ಳಿ, ತುಂಗಾನಗರ, ವಿಶ್ವೇಶ್ವರ ನಗರ, ಅಂಜನಾ ನಗರ, ಅನ್ನಪೂರ್ಣೇಶ್ವರಿ ನಗರ, ಸುಂಜದಕಟ್ಟೆ, ನೀಲಗಿರಿ ಹೆಗ್ಗನಹಳ್ಳಿ, ಕೊಡಿಗೇಹಳ್ಳಿ, ಸ್ಕಡಾ ನಗರ, ಚಿಕ್ಕಗೊಲ್ಲರಹಟ್ಟಿ, ಸೀಗೆಹಳ್ಳಿ, ಪದ್ಮಾವತಿ ಕೈಗಾರಿಕಾ ಪ್ರದೇಶ, ಶಾಂತಿಲಾಲ್ ಲೇಔಟ್, ಬಿಬಿಎಂಪಿ ಸ್ಥಾವರ, ರಂಗೇಗೌಡ ಲೇಔಟ್, ಕನ್ನಹಳ್ಳಿ, ಸುಂಕದಕಟ್ಟೆ ಕೈಗಾರಿಕಾ ಪ್ರದೇಶ, ಡಿ ಗ್ರೂಪ್ ಲೇಔಟ್ ಮತ್ತು ಆರ್‌ಎಚ್‌ಸಿಎಸ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.



