ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಕಟ್: ಇಂದು ಪವರ್ ಇಲ್ಲದ ಏರಿಯಾಗಳ ಪಟ್ಟಿ ಇಲ್ಲಿದೆ!

0
Spread the love

ಬೆಂಗಳೂರು:– ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಇಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ. ಹೀಗಾಗಿ ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

Advertisement

66/11 ಕೆ.ವಿ ಪ್ರೆಸ್ಟೀಜ್ ಫಾಲ್ಕನ್ ಸಿಟಿ, ಜಯನಗರ ವಿಭಾಗ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಫೋರಮ್ ಮಾಲ್, ಪ್ರೇಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್, ದೊಡ್ಡಕಲ್ಲಸಂದ್ರ, ಕನಕಪುರ ಮುಖ್ಯರಸ್ತೆ, ನಾರಾಯಣ ನಗರ 3ನೇ ಬ್ಲಾಕ್, ಮುನಿ ರೆಡ್ಡಿ ಲೇಔಟ್, ಕುಮಾರನ್ಸ್ ಶಾಲೆ, ಜ್ಯೋತಿ ಲೇಔಟ್, ಗಂಗಪತಿಪುರ, ಸುಪ್ರಜಾ ನಗರ, ಜೆಎಸ್‌ಎಸ್‌ ಶಾಲೆ, ಜರಗನಹಳ್ಳಿ ಪಾರ್ಕ್, ಗಂಗಾಧರೇಶ್ವರ ದೇವಸ್ಥಾನ, ಬಸವರಾಜು ಲೇಔಟ್, ಶಾಂತಿ ಸಾ ಮಿಲ್, ರಾಜೀವ್ ಗಾಂಧಿ ರಸ್ತೆ, ಸಾರಕ್ಕಿ ಕೆರೆ, ಸಾರಕ್ಕಿ ಸಿಗ್ನಲ್, ನಾಗಾರ್ಜುನ ಪ್ರೀಮಿಯರ್ ಅಪಾರ್ಟ್‌ಮೇಂಟ್, ಶ್ರೀನಿಧಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here