ಬೆಂಗಳೂರು:- ತುರ್ತು ಕಾಮಗಾರಿ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದಿನಿಂದ ಎರಡು ದಿನ ಪವರ್ ಕಟ್ ಇರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.
ನಗರದ ಅತ್ತಿಬೆಲೆ ವ್ಯಾಪ್ತಿಯ ಯಡವನಹಳ್ಳಿ, ಇಚ್ಚಂಗೂರು, ವಡ್ಡರಪಾಳ್ಯ, ಅತ್ತಿಬೆಲೆ ಕೈಗಾರಿಕಾ ಪ್ರದೇಶ, ಬಳಗಾರನಹಳ್ಳಿ, ಮಂಚನಹಳ್ಳಿ, ಅತ್ತಿಬೆಲೆ ಟೌನ್, ಮಾಯಸಂದ್ರ, ದಾಸನಾಪುರ, ಬಲ್ಲೂರು, ಕಂಬಳಿಪುರ, ಚಿಕ್ಕ ಕಾನಹಳ್ಳಿ, ಇಂಡ್ಲಬೆಲೆ ಮತ್ತು ಹಾರೋಹಳ್ಳಿ.
ಆನೇಕಲ್ ಟೌನ್, ಕಾವಲಹೊಸಹಳ್ಳಿ, ಗೌರೇನಹಳ್ಳಿ, ಹಾಲ್ದೇನಹಳ್ಳಿ, ಹೊಂಪಲಘಟ್ಟ, ಚೂಡೇನಹಳ್ಳಿ, ಹೊನ್ನ ಕಳಸಾಪುರ, ಕರ್ಪೂರು, ಬ್ಯಾಗಡದೇನಹಳ್ಳಿ, ಕಾದ ಅಗ್ರಹಾರ, ಚಿಕ್ಕಹಾಗಡೆ, ದೊಡ್ಡಹಾಗಡೆ, ಸಮಂದೂರು, ರಾಚಮನಹಳ್ಳಿ, ಗುಡ್ಡನಹಳ್ಳಿ, ಅರವಂಟಿಗೆ ಪುರ, ಪಿ.ಗೊಲ್ಲಹಳ್ಳಿ, ತೆಲಗಾರ ಹಳ್ಳಿ, ವನಕನಹಳ್ಳಿ ಸೇರಿ ಹಲವೆಡೆ ಪವರ್ ಕಟ್ ಇರಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.