ಬೆಂಗಳೂರು:- ವಿದ್ಯುತ್ ಸ್ಟೇಷನ್ ಕಾಮಗಾರಿ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ವಿದ್ಯುತ್ ವ್ಯತ್ಯಯ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದು, ” ಸುಬ್ರಮಣ್ಯಪುರ ನಿರ್ವಹಣಾ ಕಾಮಗಾರಿ ನಿಮಿತ್ತ ಶುಕ್ರವಾರ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ” ಎಂದು ತಿಳಿಸಿದ್ದಾರೆ.
ಅದರಂತೆ ನಗರದ ಗುಬ್ಬಲಾಳ, ಉತ್ತರಹಳ್ಳಿ, ಇಸ್ರೋ ಲೇಔಟ್ ಇಂಡಸ್ಟ್ರಿಯಲ್ ಏರಿಯಾ, ಆದರ್ಶ್ ಅಪಾರ್ಟ್‌ಮೆಂಟ್ 1 & 2, ಮಂತ್ರಿ ಟ್ರಾನ್ಕ್ವಿಲ್ ಅಪಾರ್ಟ್‌ಮೆಂಟ್, ಮಾರುತಿ ಲೇಔಟ್, ಭಾರತ್ ಲೇಔಟ್, ದೊಡ್ಡಕಲ್ ಸಂದ್ರ ಇಂಡಸ್ಟ್ರಿಯಲ್ ಏರಿಯಾ, ಅಗರ ಮತ್ತು ಸುತ್ತಮುತ್ತಲ ಪ್ರದೇಶಗಳು, ಕುಮಾರಸ್ವಾಮಿ ಬಡಾವಣೆ, ವಿಠ್ಠಲ ನಗರ, ಯಾದಳಾಂ ನಗರ, ಮಾರುತಿನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.