ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಏರಿಯಾಗಳಲ್ಲಿ ಡಿಸೆಂಬರ್ 8 ರವರೆಗೂ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕೆಪಿಟಿಸಿಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆ ಡಿಸೆಂಬರ್ 8ರ ವರೆಗೂ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅದರಂತೆ ವೈಟ್‌ಫೀಲ್ಡ್, ಹೂಡಿ, ಐಟಿಪಿಎಲ್, ಮಹದೇವಪುರ, ಶಿವಾಜಿನಗರ, ರಿಚ್‌ಮಂಡ್ ಟೌನ್ ಮತ್ತು ಎಂಜಿ ರಸ್ತೆಯ ಕೆಲವೆಡೆ ಕರೆಂಟ್ ಕಟ್ ಆಗಲಿದೆ.
ಅಲ್ಲದೇ ಜೆಪಿ ನಗರ, ಜಯನಗರ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಉತ್ತರಹಳ್ಳಿ, ಪದ್ಮನಾಭನಗರ, ಅರೇಹಳ್ಳಿ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ನಾಗರಭಾವಿ, ಚಂದ್ರ ಲೇಔಟ್, ಮಾಗಡಿ ರಸ್ತೆ, ಹೆಬ್ಬಾಳ, ಸಂಜಯನಗರ, ಯಲಹಂಕ, ವಿದ್ಯಾರಣ್ಯಪುರ, ಆರ್‌ಟಿ ನಗರ, ಸಹಕಾರ ನಗರ, ವೈಟ್ ಫೀಲ್ಡ್, ಹೂಡಿ, ಕೆಆರ್ ಪುರಂ, ಐಟಿಪಿಎಲ್, ಮಹದೇವಪುರ, ವರ್ತೂರು, ಶಿವಾಜಿನಗರ, ಶಾಂತಿನಗರ, ರಿಚ್ಮಂಡ್ ಟೌನ್, ಲ್ಯಾಂಗ್ಫೋರ್ಡ್ ರಸ್ತೆಯ ಕೆಲವಯ ಭಾಗಗಳಲ್ಲಿ ಕರೆಂಟ್ ಕಟ್ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.


