Power Cut: ಇಂದು ಬೆಂಗಳೂರಿನ ಈ ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ!

0
Spread the love

ಬೆಂಗಳೂರು:- ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Advertisement

ಲೈನ್‌ ಅಳವಡಿಕೆ, ಟಿಎಲ್‌ ಸೇರಿದಂತೆ ವಿದ್ಯತ್‌ಗೆ ಸಂಬಂಧಿಸಿದಂತೆ ಇನ್ನಿತರೆ ಕಾಮಗಾರಿ ನಡೆಯುವ ಭಾಗಗಳಲ್ಲಿ ವಿದ್ಯುತ್‌ ವ್ಯತ್ಯಯ ಮಾಡಲಾಗುತ್ತದೆ.

ಇಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ 220/66/11 ಕೆ.ವಿ ಹೆಬ್ಬಾಳ ಸ್ವೀಕರಣಾ ಕೇಂದ್ರದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಈ ವೇಳೆ ಸ್ವೀಕರಣಾ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ವಿದ್ಯುತ್‌ ವ್ಯತ್ಯಯ ಎಲ್ಲೆಲ್ಲಿ.?: ಮಂಗಳವಾರ ಜಯಮಹಲ್ ವಿಸ್ತರಣೆ, ನಂದಿ ದುರ್ಗಾ, ದೂರದರ್ಶನ, ಜಯಮಹಲ್ ರಸ್ತೆ, ಮುನಿರೆಡ್ಡಿ ಪಾಳ್ಯ, ಜೆ.ಸಿ.ನಗರ, ಮಾರಪ್ಪ ಗಾರ್ಡನ್‌, ಚಿನಪ್ಪ ಗಾರ್ಡನ್‌, ಎನ್.ಡಿ.ರಸ್ತೆ ಏರ್‌ಟೆಲ್ ಸಮೀಪದ ಬಡಾವಣೆಗಳಲ್ಲಿ ವಿದ್ಯುತ್‌ ವ್ಯತ್ಯಯ ಆಗಲಿದೆ.


Spread the love

LEAVE A REPLY

Please enter your comment!
Please enter your name here