ವಿಜಯನಗರ: ಜಿಲ್ಲೆಯ ಹೊಸಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕರೆಂಟ್ ಕಟ್ ಆಗಿ ರೋಗಿಗಳು ಪರದಾಟ ನಡೆಸಿದ ಘಟನೆ ಜರುಗಿದೆ.
Advertisement
ಕಳೆದ ಎರಡು ತಾಸುಗಳಿಂದ ಕರೆಂಟ್ ಇಲ್ಲಗೇ, ಜನರೇಟರ್ ಕೂಡ ಆಫ್ ಆಗಿದ್ದು, ಹಸುಗೂಸುಗಳು, ಬಾಣಂತಿಯರು ಪರದಾಟ ನಡೆಸಿದ್ದಾರೆ. ಕರೆಂಟ್ ಇಲ್ಲದ ಕಾರಣ ಮೊಬೈಟ್ ಟಾರ್ಚ್ ಹಾಕಿಕೊಂಡು ರೋಗಿಗಳು, ಸಂಬಂಧಿಕರು ಹೋಗುತ್ತಿದ್ದು, ಭಾರೀ ಪರದಾಟ ನಡೆಸಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ದುಸ್ಥಿತಿ ಕಂಡು ಬಂದಿದ್ದು, ಐಸಿಯು ಸೇರಿದಂತೆ ನಾನಾ ಕಡೆ ರೋಗಿಗಳು ಪರದಾಡಿದ್ದಾರೆ.
ಬೆಳಗ್ಗೆಯಿಂದ ನಗರದಲ್ಲಿ ಕರೆಂಟ್ ಇಲ್ಲಾ, ಈಗ ಜನರೇಟರ್ ಕೂಡ ಬಂದ್ ಆಗಿದೆ . ಕಳೆದ ಎರಡೂ ತಾಸುಗಳಿಂದ ರೋಗಿಗಳು, ಸಂಬಂಧಿಕರ ಪರದಾಟ ನಡೆಸಿರುವ ದೃಶ್ಯ ಕಂಡು ಬಂದಿದೆ.