ವಿಜಯಸಾಕ್ಷಿ ಸುದ್ದಿ, ಮುಳಗುಂದ : ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ. ಶಿಕ್ಷಣದ ಜೊತೆಯಲ್ಲಿ ಉತ್ತಮ ಸಂಸ್ಕಾರ ನಿಡುತ್ತಿರುವ ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರ ಕಾರ್ಯ ಅತ್ಯಂತ ಶ್ಲಾಘನಿಯವಾದದ್ದು ಎಂದು ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರಸ್ವಾಮಿಜಿ ಹೇಳಿದರು.
ಅವರು ಸಮೀಪದ ನೀಲಗುಂದ ಗುದ್ನೇಶ್ವರಮಠದಲ್ಲಿ ಮಾಹಾ ಶಿವರಾತ್ರಿ ಅಂಗವಾಗಿ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಮಗು ಶಿಕ್ಷಣ ಪಡೆದಾಗ ಮಾತ್ರ ಮಗುವಿನ ಬದುಕು ಸುಂದರವಾಗುವದು. ಇಂತಹ ಗುಣಮಟ್ಟದ ಶಿಕ್ಷಣ ಜೊತೆಗೆ ಒಳ್ಳೆಯ ಸಂಸ್ಕಾರ ನೀಡುವ ಕಾರ್ಯವನ್ನು ನೀಲಗುಂದದ ಗುದ್ನೇಶ್ವರಮಠದ ದಿವ್ಯ ಚೇತನ ಟ್ರಸ್ಟ್ ಮಾಡುತ್ತಿದೆ ಎಂದರು.
ಗದಗ ಡಿಡಿಪಿಐ ಎಂ.ಎ. ರಡ್ಡೇರ ಮಾತನಾಡಿ, ಸಂವಿಧಾನ ಪರಿಚ್ಛೇದ ೨೧ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಯೊಬ್ಬರು ಜೀವಿಸುವ, ಶಿಕ್ಷಣ ಪಡೆಯುವ ಹಕ್ಕು ಮತ್ತು ಕರ್ತವ್ಯ ನೀಡಿದ್ದಾರೆ. ಮಕ್ಕಳಲ್ಲಿ ಪಾಲಕರು ರಾಷ್ಟç, ದೇಶ ಪ್ರೇಮ ಬೆಳೆಸಬೇಕು, ಮಕ್ಕಳ ದಿನ ನಿತ್ಯ ಓದಿನ ಕಡೆ ಗಮನ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಯಲ್ಲಿ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಎಂದರು.
ದಿವ್ಯ ಸಾನಿಧ್ಯವನ್ನು ಶಿಗ್ಲಿ ವಿರಕ್ತಮಠದ ಚನ್ನವೀರಸ್ವಾಮಿಗಳು ವಹಿಸಿದ್ದರು. ನೀಲಗುಂದ ಪ್ರಭುಲಿಂಗ ದೇವರು, ಬಿಇಓ ವಿ.ವಿ. ನಡುವಿನಮನಿ, ಎಂ.ಎಚ್. ಕಂಬಳಿ ಇದ್ದರು.