HomeGadag Newsಸೇವೆಯಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳಿ

ಸೇವೆಯಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ರೋಗಿಗಳನ್ನು ಉಳಿಸುವಾಗ ನಮ್ಮನ್ನು ನಾವು ಕಾನೂನಾತ್ಮಕ ರಕ್ಷಿಸಿಕೊಳ್ಳುವುದಕ್ಕೂ ಆದ್ಯತೆ ನೀಡಬೇಕು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಭಾಂಗಣದಲ್ಲಿ ಐಎಂಎ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಮೆಡಿಕೋ-ಲೀಗಲ್ ವಾರ್ಷಿಕ ಕರ್ನಾಟಕ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೈನಂದಿನ ಕರ್ತವ್ಯದಲ್ಲಿ ಕಾನೂನು ಪಾಲನೆ ನಮ್ಮೆಲ್ಲರಿಗೂ ಅನಿವಾರ್ಯ. ಕಾನೂನು ಪಾಲನೆಯೊಂದಿಗೆ ಕರ್ತವ್ಯದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಮೂಲಕ ನೈತಿಕತೆ ಮತ್ತು ಪ್ರಾಮಾಣಿಕತೆಯಿಂದ ದೈನಂದಿನ ಕೆಲಸ ನಿರ್ವಹಿಸಬೇಕು. ಸರ್ಕಾರ ನಿಗದಿಪಡಿಸಿದ ಮಾರ್ಗಸೂಚಿಗಳನ್ವಯ ಜನರ ಆರೋಗ್ಯ ಜೀವನ ಮಟ್ಟ ಸುಧಾರಣೆಗೆ ವೈದ್ಯರು ಸೇವೆ ನಿರ್ವಹಿಸಬೇಕು. ಸೇವೆಯಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಳ್ಳಬೇಕು. ನಾಗರಿಕ ಸಮಾಜ ವೈದ್ಯರನ್ನು ಗಮನಿಸುತ್ತಿರುತ್ತದೆ. ಕಾನೂನು ವ್ಯಾಪ್ತಿಯಲ್ಲೇ ಕಾಯಕ ನಿಷ್ಠರಾಗಬೇಕು. ಹಿರಿಯ ವೈದ್ಯರ ಸೇವೆಯನ್ನು ಕಿರಿಯ ವೈದ್ಯರು ಅನುಕರಿಸಬೇಕು. ಸಾಮಾಜಿಕ ವ್ಯವಸ್ತೆಯಲ್ಲಿ ವೈದ್ಯರು ಚಿಕಿತ್ಸೆ ವಿಳಂಬ ಮಾಡಬಾರದು ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಐಎಂಎ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಿ.ಬಿ. ಬಿಡನಾಳ ಮಾತನಾಡಿ, ವೈದ್ಯರು ದೈನಂದಿನ ಸೇವೆಯಲ್ಲಿ ಕಾನೂನು ತೊಡಕುಗಳ ಬಗ್ಗೆ ಅರಿವು ಹೊಂದುವ ಅನಿವಾರ್ಯತೆ ಇದೆ. ನಿರ್ಲಕ್ಷ್ಯ ವಹಿಸಿದರೆ ತೊಂದರೆಗೆ ಒಳಗಾಗುತ್ತೇವೆ ಎಂಬುದನ್ನು ಮರೆಯಬಾರದು ಎಂದರು.

ಡಾ. ವಿ.ಡಿ. ಚಿನಿವಾಲ ಮಾತನಾಡಿ, ಪ್ರಥಮ ಬಾರಿಗೆ ರಾಜ್ಯದಲ್ಲಿ ಮೆಡಿಕೊ ಸಮ್ಮೇಳನ ನಡೆಸಿದ ಕೀರ್ತಿ ಗದಗ ಜಿಲ್ಲೆಗೆ ಸಲ್ಲುತ್ತದೆ. ಜಿಲ್ಲೆಯು ಸಹಕಾರಿ ಕ್ಷೇತ್ರದ ಜತೆಗೆ ವಾಣಿಜ್ಯ ಕ್ಷೇತ್ರದಲ್ಲೂ ಅಭಿವೃದ್ಧಿ ಆಗುತ್ತಿದೆ. ಅಂತೆಯೇ ವೈದ್ಯಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಸಂತಸ ತಂದಿದೆ ಎಂದರು.

ಐಎಂಎ ರಾಷ್ಟ್ರೀಯ ಅಧ್ಯಕ್ಷ ದಿಲೀಪ ಬನ್ಸಾಲಿ, ಡಾ. ಯೋಗಾನಂದ ರೆಡ್ಡಿ, ಡಾ. ಬಸವರಾಜ ಬೊಮ್ಮನಹಳ್ಳಿ, ಡಾ. ವೀರಭದ್ರಪ್ಪ, ಡಾ. ವಿ.ಎ. ಮಾಲೂರು, ಡಾ. ರಾಜಶೇಖರ ಬಳ್ಳಾರಿ, ಡಾ. ಅನ್ನದಾನಿ ಮೇಟಿ, ಡಾ. ವೆಂಕಟಾ ಚಲಪತಿ, ಡಾ. ಹೊನ್ನೆಗೌಡ. ಡಾ. ತುಕಾರಾಂ ಸೂರಿ, ಡಾ. ಅರವಿಂದ, ಡಾ. ರಾಧಿಕಾ ಕುಲಕರ್ಣಿ ಇತರರು ಇದ್ದರು.

ಆರೋಗ್ಯಯುತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಮುಖ್ಯವಾಗಿದೆ. ಸಾಮಾಜಿಕ ಹೊಣೆಗಾರಿಕೆಯು ವೈದ್ಯರ ಕರ್ತವ್ಯದಲ್ಲೇ ಅಡಗಿರುತ್ತದೆ. ಕರ್ತವ್ಯದಲ್ಲಿ ವೈದ್ಯರು ಜೀವನ ಅಡವಿಟ್ಟು ಸೇವೆ ಮಾಡುತ್ತಾರೆ. ಪ್ರಕೃತಿ ವಿಕೋಪ, ಯುದ್ಧದ ಸಂದರ್ಭದಲ್ಲಿ, ಆಂತರಿಕ ಸಂಘರ್ಷದ ಸಂದರ್ಭದಲ್ಲಿ ವೈದ್ಯರ ಸೇವೆ ಪ್ರಮುಖವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ವೈದ್ಯರಿಗೆ ಕಾನೂನು ತೊಡಕು ಎದುರಾಗುತ್ತವೆ. ಕಾನೂನು ತೊಡಕುಗಳಿಂದ ಜೀವ ರಕ್ಷಣೆ ಮಾಡಿಕೊಂಡು ಸೇವೆಯಲ್ಲಿ ತೋಡಗಿಸುವುದು ಹೇಗೆ ಎಂಬುದನ್ನು ಈ ಸಮ್ಮೇಳನದಿಂದ ಕಲಿಯಬಹುದಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!